Sunday, January 19, 2025
ಸುದ್ದಿ

ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರ್ಕೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ -ಕಹಳೆ ನ್ಯೂಸ್

ಬ್ರಹ್ಮಾವರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಮೊಗವೀರ ಕುಲ ಬಾಂಧವರು ಶ್ರದ್ದಾ ಭಕ್ತಿಯಿಂದ ನಂಬಿ ಆರಾಧಿಸಿಕೊಂಡು ಬಂದ ಮೂಲಸ್ಥಾನವೇ ಬೆಣ್ಣೆಕುದ್ರುವಿನಲ್ಲಿ ನೆಲೆನಿಂತ ಶ್ರೀ ಕುಲಮಹಾಸ್ತ್ರೀ ಅಮ್ಮನ ದೇವಸ್ಥಾನ ಇದರ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವು 9 ತಲೆಮಾರಿನ ಶ್ರೇಷ್ಠವಾದ ಭವ್ಯ ಗುರುಪರಂಪರೆಯ ನೆಲೆಯಾಗಿತ್ತು. ಹತ್ತು, ಹಲವು ಮಂದಿ ಭಕ್ತರು ಒಟ್ಟಿಗೆ ಸೇರಿ ಸಾಮೂಹಿಕ ನೆಲೆಯಲ್ಲಿ ಸಮುದಾಯದ ಒಳಿತಿಗೆ ಮಾಡುವ ಸಾಮೂಹಿಕ ಪ್ರಾರ್ಥನೆಗೆ ಈ ಕ್ಷೇತ್ರದಲ್ಲಿ ವಿಶೇಷ ಪ್ರಾಶಸ್ತ್ಯವಿದೆ.

ಈ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 15 ರಿಂದ ಡಿ. 19 ರ ತನಕ ನಡೆಯುತ್ತಿದ್ದು, ಡಿ. 15 ರಂದು ಗೆಂಡ ಸೇವೆ ಹಾಗೂ 16 ರಂದು ಸೋಮವಾರ ಪರಿವಾರ ದೇವರುಗಳ ನೃತ್ಯಸೇವೆ, ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ಹಾಗೂ ತೆಪ್ಪೋತ್ಸವ ಸಂಪನ್ನಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು