ಎಂಸಿಸಿ ಬ್ಯಾಂಕಿನ ಅಧ್ಯಕ್ಷರಿಂದ ಸಾಲ ಮರುಪಾವತಿಗೆ ಕಿರುಕುಳ; ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ವ್ಯಕ್ತಿಯೊಬ್ಬರು, ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಾಲ ಮರು ಪಾವತಿ ವಿಚಾರಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮಂಗಳೂರು, ಡಿ.18: ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ವ್ಯಕ್ತಿಯೊಬ್ಬರು, ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಾಲ ಮರು ಪಾವತಿ ವಿಚಾರಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತರನ್ನು ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ (47 ವ) ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆ ಈ ಕಾರಣಕ್ಕೆ ಬ್ಯಾಂಕ್ ಮನೆಯನ್ನು ಸೀಜ್ ಮಾಡಿತ್ತು, ಬಳಿಕ ಮನೋಹರ್ ಸಾಲ ತೀರಿಸಲು ಚಾರಿಟಿ ಸಂಸ್ಥೆಯಿAದ 15 ಲಕ್ಷ ಮೊತ್ತವನ್ನು ಸೆಲ್ಫ್ ಚೆಕ್ ಮೂಲಕ ಬ್ಯಾಂಕಿಗೆ ನೀಡಿದ್ದರೆಂದು ಹೇಳಲಾಗಿದೆ. ಆದರೆ ಈ ಸೆಲ್ಫ್ ಚೆಕ್ ನಲ್ಲಿ ನೀಡಿದ್ದ ಮೊತ್ತವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ನುಂಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಾವಿಗೂ ಮುನ್ನ 9 ಲಕ್ಷ ಹಣವನ್ನು ಅನಿಲ್ ಲೋಬೊ ತಿಂದಿದ್ದಾಗಿ ಮನೋಹರ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮತ್ತಷ್ಟು ಹಣ ಕಟ್ಟಲು ಒತ್ತಡ ಹಾಕಿದ್ದು, ಇದರಿಂದ ಮಾನಸಿಕ ಕಿರುಕುಳ, ಜಿಗುಪ್ಸೆಯಿಂದ ಮಂಗಳೂರು ಹೊರವಲಯದ ಉಳಾಯಿಬೆಟ್ಟಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮAಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಇದೀಗ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.