Thursday, March 27, 2025
ಅಂತಾರಾಷ್ಟ್ರೀಯಸುದ್ದಿ

ಜಾನಪದ ಕಲಾವಿದ, ಪದ್ಮಶ್ರೀ ಪುರಸ್ಕೃತ, ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ವಿದಿವಷ-ಕಹಳೆ ನ್ಯೂಸ್

ಹೈದರಾಬಾದ್ : ಬಳಗಂ ಚಿತ್ರದ ಮೂಲಕ ಜನಮನ್ನಣೆ ಗಳಿಸಿದ್ದ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ದರ್ಶನಂ ಮೊಗಿಲಯ (67) ಗುರುವಾರ(ಡಿ.18) ಬೆಳಗ್ಗೆ ನಿಧನರಾಗಿದ್ದಾರೆ.

ಕಿನ್ನರ ಮೊಗಿಲಯ್ಯ ಎಂದೂ ಕರೆಯಲ್ಪಡುವ ಮೊಗಿಲಯ್ಯ ಅವರು ಮೂತ್ರಪಿಂಡ ಕಾಯಿಲೆಯಿಂದ ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಗಿಲಯ್ಯ ಅವರು ಬುಡಕಟ್ಟು ಸಂಗೀತ ಪೊದ್ಯಗಾರರಲ್ಲಿ ಒಬ್ಬರು. ಸಂಗೀತ ಪರಿಕರಗಳಲ್ಲಿಯೇ ಅಪರೂಪವಾದ ‘ಕಿನ್ನರ’ಕ್ಕೆ ಮರುಜೀವ ಕೊಟ್ಟವರೇ ಮೊಗಿಲಯ್ಯನವರು ಅಲ್ಲದೆ ಇದಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರಿಂದಾಗಿ ಮೊಗಿಲಯ್ಯ ಅವರಿಗೆ ಕಿನ್ನರ ಮೊಗಿಲಯ್ಯ ಎಂದೇ ಖ್ಯಾತರಾಗಿದ್ದರು. ಇದಾದ ಬಳಿಕ 2022 ರಲ್ಲಿ ಮೊಗಿಲಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತೆಲಂಗಾಣದ ಹಳ್ಳಿಯ ಜನರ ಬದುಕಿನ ಹಿನ್ನೆಲೆಯನ್ನು ಇಟ್ಟುಕೊಂಡು ಬಿಡುಗಡೆಯಾದ ಬಲಗಂ ಚಿತ್ರ ಅಬ್ಬರದ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈ ಸಿನಿಮಾದ ಕ್ರೈಮ್ಯಾಕ್ಸ್ ನಲ್ಲಿ ಭಾವನಾತ್ಮಕ ಗೀತೆಯೊಂದನ್ನು ಹಾಡುವ ಮೂಲಕ ಮೊಗಿಲಯ್ಯ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಈ ಚಿತ್ರದ ಮೂಲಕ ರಾಜ್ಯಾದ್ಯಂತ ಜನಮನ್ನಣೆಯನ್ನೂ ಗಳಿಸಿದರು.

ಮೊಗಿಲಯ್ಯ ನಿಧನಕ್ಕೆ ಚಿತ್ರತಂಡ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ