ಸೊಮಾಲಿಯಾ: ಆಫ್ರಿಕಾದ ಸೊಮಾಲಿಯಾ ರಾಜ್ಯದ ರಾಜಧಾನಿ ಮೊಗದಿಶುವಿನಲ್ಲಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ.
ಇಲ್ಲಿನ ಸಹಾಫಿ ಹೋಟೆಲ್ ಬಳಿ ಒಂದೇ ನಿಮಿಷದಲ್ಲಿ ಎರಡು ಬಾಂಬ್ಗಳು ಸ್ಫೋಟಿಸಿವೆ. ಈ ಹೋಟೆಲ್ ಸೋಮಾಲಿ ಪೊಲೀಸ್ ಫೋರ್ಸ್ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರಿಗೆ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆಕ್ರಮಣಕಾರರನ್ನ ಹತ್ಯೆಗೈದು ಹೋಟೆಲ್ ರೂಮಿನಲ್ಲಿದ್ದವರನ್ನ ರಕ್ಷಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅದಾದ ಬಳಿಕ ಹೋಟೆಲ್ ಬಳಿಯೇ ಎರಡು ಬಾಂಬ್ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನೆಲ್ಲ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇದು ಅಲ್-ಶಬಾಬ್ ಉಗ್ರಸಂಘಟನೆಯ ಕೃತ್ಯ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದು ಪಸೋಮಾಲಿಯಾ ಸರ್ಕಾರ ಹೇಳಿದೆ. 2011ರಲ್ಲಿ ಅಲ್ ಶಬಾಬ್ ಸಂಘಟನೆಯನ್ನು ಮಗದಿಶು ಪ್ರದೇಶದಿಂದ ಬಲವಂತವಾಗಿ ಹೊರಹಾಕಲಾಗಿತ್ತು.