Wednesday, January 22, 2025
ಉಡುಪಿಸುದ್ದಿ

ಜೆಸಿಐ ಕುಂದಾಪುರ 50ರ ಸಂಭ್ರಮ: ಡಿ.22- 26ರ ವರೆಗೆ ನಾಟಕೋತ್ಸವ ಸಂಭ್ರಮ -ಕಹಳೆ ನ್ಯೂಸ್

ಉಡುಪಿ : ಜೆಸಿಐ ಕುಂದಾಪುರ ಇದರ 50ರ ಸಂಭ್ರಮದ ಅಂಗವಾಗಿ ‘ನಾಟಕೋತ್ಸವ’ ಕಾರ್ಯಕ್ರಮವನ್ನು ಇದೇ ಡಿ.22ರಿಂದ 26ರ ವರೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಕುಂದಾಪುರ ಅಧ್ಯಕ್ಷ ಚಂದನ್ ಗೌಡ ತಿಳಿಸಿದರು.

ಈ ಕುರಿತು ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿದಿನ ಸಂಜೆ 7.30ರಿಂದ ನಾಟಕ ಪ್ರದರ್ಶನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.22ರಂದು ರಂಗ ಸಂಗಾತಿ ತಂಡದಿಂದ ‘ದಟ್ಸ್ ಆಲ್ ಯುವರ್ ಆನರ್, ಡಿ.23ರಂದು ಭೂಮಿಕಾ ಹಾರಾಡಿ ತಂಡದಿಂದ ‘ಬರ್ಬರಿಕ’, ಡಿ.24ರಂದು ನೀನಾಸಂ ಹೆಗ್ಗೋಡು ತಂಡದಿಂದ ‘ಮಾಲತೀ ಮಾಧವ’, ಡಿ.25ರಂದು ನೀನಾಸಂ ಹೆಗ್ಗೋಡು ತಂಡದಿಂದ ‘ಅಂಕದ ಪರದೆ’ ಹಾಗೂ ಡಿ.26ರಂದು ಭಳಿರೇ ವಿಚಿತ್ರಂ ತಂಡದಿಂದ ‘ದಶಾನನ ಸ್ವಪ್ನ ಸಿದ್ದಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಜೇಸಿ ಸಂಯೋಜಕಿ ಶರ್ಮಿಳಾ ಕಾರಂತ, ನರಸಿಂಹ ಐತಾಳ್, ರಾಕೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.