Saturday, November 23, 2024
ಸುದ್ದಿ

ಟಿಪ್ಪು ಜಯಂತಿಗೆ ನಾಯಕರ ಗೈರು ಹಿನ್ನಲೆ, ಮಾಜಿ ಸಿಎಂ ಸಿದ್ದರಾಮಯ್ಯ ಅನುಮಾನಾಸ್ಪದ ಟ್ವೀಟ್ ; ಟ್ವೀಟ್ ಆಗಿದ್ದು ಮಾತ್ರ ಮಂಗಳೂರಿಂದ …? – ಕಹಳೆ ನ್ಯೂಸ್

ಬಿಜೆಪಿ ವಿರೋಧದ ನಡುವೆಯೂ ವಿವಾದಿತ ಟಿಪ್ಪು ಜಯಂತಿ ಆಚರಣೆಯನ್ನು ಮೈತ್ರಿ ಸರ್ಕಾರ ನಿನ್ನೆ ಆಚರಿದ್ದು. ಸರ್ಕಾರಿ ಕಾರ್ಯಕ್ರಮಕ್ಕೆ ಖುದ್ದು ಆಡಳಿತಯಂತ್ರದ ಪ್ರಮುಖರೇ ಹಾಜರಾಗದಿರುವ ಕುರಿತು ಮಾಜಿ ಸಿಎಂ ಇಂದು ಟ್ವೀಟ್ ಮಾಡಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದ ಟಿಪ್ಪು ಜಯಂತಿಯನ್ನು ಈ ಬಾರಿ ಮೈತ್ರಿ ಸರ್ಕಾರದ ಪಾಲುದಾರರಾದ ಕಾಂಗ್ರೆಸ್- ಜೆಡಿಎಸ್ ಶಾಸಕರು ಶನಿವಾರ ಆಚರಿಸಿದ್ದಾರೆ. ಆದರೆ, ಈ ಬಾರಿ ಕಾರ್ಯಕ್ರಮದಲ್ಲಿ ಸ್ವಪಕ್ಷೀಯ ನಾಯಕರು ಹಾಗೂ ವಿಧಾನಸೌಧದಲ್ಲಿ ಆಡಳಿತದ ಪ್ರಮುಖರೇ ಗೈರಾಗುವ ಮೂಲಕ ಪರೋಕ್ಷವಾಗಿ ಈ ಕಾರ್ಯಕ್ರಮದ ಆಚರಣೆ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಪ್ಪು ಜಯಂತಿ ಆಚರಣೆ ಒಂದು ಕೋಮಿನ ಓಲೈಕೆಯಲ್ಲ. ಬದಲಾಗಿ ದೇಶಪ್ರೇಮಿ, ಜಾತ್ಯತೀತ ರಾಜನಾಗಿದ್ದ ಟಿಪ್ಪುವಿಗೆ ನೀಡುವ ಗೌರವ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಈ ನಾಡಿಗೆ ಬಗೆವ ದ್ರೋಹ. ನಾಡಿಗೆ ಕೊಡುಗೆ ನೀಡದ ಟಿಪ್ಪು ನೀಡಿದ ಕೊಡಗೆ ಸ್ಮರಿಸಿ ಅವರಿಗೆ ನೀಡುತ್ತಿರುವ ಗೌರವ ಎಂದು ಈ ಹಿಂದೆಯಿಂದಲೂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆಯನ್ನು ಸಮರ್ಥಿಸಿಕೊಂಡು ಬಂದಿದ್ದಾರೆ.

ಆದರೆ, ಈಗ ತಮ್ಮ ಮೈತ್ರಿ ಪಕ್ಷವೇ ಈ ಆಚರಣೆಗೆ ಅಸಹಕಾರ ನೀಡಿರುತ್ತಿರುವುದು ಸಿದ್ದರಾಮಯ್ಯ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ತಾವು ನೀಡಿದ ಹೇಳಿಕೆಗೆ ಕಟ್ಟು ಬಿದ್ದು ಅಥವಾ ಮತರಾಜಕಾರಣ ದೃಷ್ಟಿಯಿಂದ ಕೆಲವರು ಸರ್ಕಾರದ ಆಚರಣೆಯಿಂದ ದೂರವಿರುವುದು ಸಮಂಜಸವಲ್ಲ. ಸಾರ್ವಜನಿಕ ಹಿತದೃಷ್ಠಿಯಿಂದ ಕೆಲವೊಂದು ವಿಷಯಗಳನ್ನು ರಾಜಿ ಮಾಡಿಕೊಳ್ಳಬೇಕು. ಆ ರೀತಿ ನಾನು ಕೂಡ ಮಾಡಿಕೊಂಡಿದ್ದೇನೆ. ಆದರೆ, ಜಾತ್ಯಾತೀತ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಸ್ವಪಕ್ಷೀಯರು ಹಾಗೂ ಮೈತ್ರಿ ಪಕ್ಷದ ನಾಯಕರ ನಡೆಗೆ ಗರಂ ಆಗಿದ್ದಾರೆ.