Friday, December 20, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಬಹುಮಾನ ವಿಜೇತ ವಿದ್ಯಾರ್ಥಿನಿಯರಿಗೆ ಹಾಗೂ ತರಬೇತುದಾರರಿಗೆ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು: 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾಲಯಗಳ ರಾಜ್ಯ ಮಟ್ಟದ ಬಾಲಕಿಯರ ತ್ರೊಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ದಕ್ಷಿಣ ಕನ್ನಡದ ಬಾಲಕಿಯರ ತಂಡದ ಸದಸ್ಯರಾಗಿದ್ದ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರನ್ನು ಸಂಸ್ಥೆಯಲ್ಲಿ ಗುರುವಾರ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅವನಿ ರೈ, ವೈಶಾಲಿ ಕೆ. ಹಾಗೂ ಪ್ರಥಮ ಪಿ.ಯು.ಸಿ.ಯ ಮತ್ತು ರಿಯ ಜೆ. ರೈ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ತ್ರೋಬಾಲ್ ತಂಡದ ಸದಸ್ಯರಾಗಿದ್ದರು.

ದಕ್ಷಿಣ ಕನ್ನಡದ ತಂಡದಲ್ಲಿ ಅಂಬಿಕಾ ವಿದ್ಯಾರ್ಥಿನಿಯರಲ್ಲದೆ ವಾಣಿ ಪಿಯು ಕಾಲೇಜಿನ ಅತಿಶ್ರಯ, ತಶ್ವಿತಾ, ಕ್ರಿಶಾಲ್, ಇಂದ್ರಪ್ರಸ್ಥ ಕಾಲೇಜಿನ ಅಮತನ್ನೂರ್ ಸಲೀಂ, ವಿವೇಕಾನಂದ ಕಾಲೇಜಿನ ಯಶ್ವಿ ಡಿ. ಶೆಟ್ಟಿ, ಶ್ರೀ ದುರ್ಗಾಪರಮೇಶ್ವರೀ ಟೆಂಪಲ್ ಕಟೀಲ್ ಕಾಲೇಜಿನ ಪವಿತ್ರ, ಸೇಂಟ್ ಜಾರ್ಜ್ ನೆಲ್ಯಾಡಿಯ ಹರ್ಷ, ಎಸ್ ಎಸ್ ಪಿಯು ಸುಬ್ರಹ್ಮಣ್ಯ ಕಾಲೇಜಿನ ಪಲ್ಲವಿ, ಎಸ್ ಡಿ ಎಂ ಉಜಿರೆಯ ರಮೀಜಾ ಭಾಗವಹಿಸಿದ್ದು, ಎಲ್ಲರಿಗೂ ತರಬೇತಿ ನೀಡಿ ಯಶಸ್ಸಿಗೆ ಕಾರಣರಾದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ತರಬೇತುದಾರ ಸಂತೋಷ್ ಕುಮಾರ್ ಏನ್ ಮತ್ತು ವ್ಯವಸ್ಥಾಪಕಿ ಚಂದ್ರಕಲಾ ಅವರನ್ನು ಕೂಡ ಸಂಸ್ಥೆಯಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲೆ ಶೈನಿ ಕೆ ಜೆ, ಉಪನ್ಯಾಸಕರಾದ ಪ್ರದೀಪ್ ಕೆ ವೈ ಮತ್ತು ಯತೀಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.
ಈ ಸ್ಪರ್ಧೆಯು ಬೆಂಗಳೂರು ಹಾಗೂ ಬಾಗಲಕೋಟೆಯ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿ ಪೂರ್ವ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16ರಿಂದ 18ರವರೆಗೆ ಆಯೋಜನೆಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು