ಕೊಬ್ಬರಿ ದರದಲ್ಲಿ ಏರಿಕೆ ಕರ್ನಾಟಕದ ರೈತರಿಗೆ ಸಂತಸದ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ – ಕಹಳೆ ನ್ಯೂಸ್
ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು, ಮಿಲ್ಲಿಂಗ್ ಕೊಬ್ಬರಿಯ (ಹೋಳಾದ) ಕನಿಷ್ಠ ಬೆಂಬಲ ಬೆಲೆ (MSP) ಕ್ವಿಂಟಾಲ್‌ಗೆ ₹12,100 ಆಗಿ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಇದು ರೈತರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.
ಇದು ಮುಂದಿನ 2025ರ ಹಂಗಾಮಿಗೆ ದೀರ್ಘಕಾಲೀನ ಆರ್ಥಿಕ ಸುಧಾರಣೆಗೆ ದಾರಿ ಮಾಡಿಕೊಡಬಹುದು.
ಮುಖ್ಯ ಅಂಶಗಳು:
ಮಿಲ್ಲಿAಗ್ ಕೊಬ್ಬರಿ (ಹೋಳಾದ): ಬೆಲೆ ₹422 ಹೆಚ್ಚಳ (ಮೊತ್ತ ಬೆಲೆ ₹12,100/ಕ್ವಿಂಟಲ್).
ಉAಡೆ ಕೊಬ್ಬರಿ: ಬೆಲೆ ₹100 ಹೆಚ್ಚಳ.
ಒಟ್ಟು ಅನುದಾನ: ಕೇಂದ್ರ ಸಂಪುಟವು ₹855 ಕೋಟಿ ವಿನಿಯೋಗಕ್ಕೆ ಒಪ್ಪಿಗೆ ನೀಡಿದೆ.
ಕರ್ನಾಟಕವು, ದೇಶದ ಕೊಬ್ಬರಿ ಉತ್ಪಾದನೆಯಲ್ಲಿ 32.7% ಅತಿ ದೊಡ್ಡ ಷೇರು ಹೊಂದಿದೆ. ಆAಧ್ರಪ್ರದೇಶವು (7.7%) ಎರಡನೇ ಸ್ಥಾನದಲ್ಲಿದೆ.
ಈ ನಿರ್ಧಾರವು ರೈತರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಜೊತೆಗೆ, ಕೊಬ್ಬರಿ ಬೆಳೆಯತ್ತ ರೈತರನ್ನು ಆಕರ್ಷಿಸಲಿದೆ. ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಈ ಹೆಜ್ಜೆ ತೀವ್ರ ಪ್ರಭಾವ ಬೀರುವ ಸಾಧ್ಯತೆಯಿದೆ.