Sunday, January 19, 2025
ಅಂತಾರಾಷ್ಟ್ರೀಯಸಂತಾಪಸುದ್ದಿ

ಬ್ರೆಜಿಲ್‌:ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಗೆ ಡಿಕ್ಕಿ ಹೊಡೆದ ಬಸ್ : ಸ್ಥಳದಲ್ಲೇ 38 ಪ್ರಯಾಣಿಕರು ಸಾವು- ಕಹಳೆ ನ್ಯೂಸ್

ಟೈರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ಟ್ರಕ್​ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 38 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಆಗ್ನೇಯ ಬ್ರೆಜಿಲ್‌ನಲ್ಲಿ ನಡೆದಿದೆ.

ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಳಗಿನ ಜಾವ 4:00ರ ಸುಮಾರಿಗೆ ಸಾವೊ ಪಾಲೊ ಪ್ರದೇಶದಿಂದ ವಿಟೋರಿಯಾ ಡ ಕಾನ್‌ಕ್ವಿಸ್ಟಾಗೆ ತೆರಳುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇಗವಾಗಿ ತೆರಳುತ್ತಿರುವಾಗ ಬಸ್​ನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಬಸ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ತಕ್ಷಣ ಹಿಂದೆಯಿಂದ ಇನ್ನೊಂದು ವಾಹನ ಬಂದು ಬಸ್​ಗೆ ಗುದ್ದಿದೆ. ಇದರಿಂದ ಸ್ಥಳದಲ್ಲೇ 38 ಪ್ರಯಾಣಿಕರು ಮೃತಪಟ್ಟಿದ್ದು 9ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಸ್​, ಟ್ರಕ್​​ಗೆ ಡಿಕ್ಕಿಯಾಗುತ್ತಿದ್ದಂತೆ ಕಾರೊಂದು ವೇಗವಾಗಿ ಬಂದು ಭೀಕರವಾಗಿ ಗುದ್ದಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಮೂರು ವಾಹನಗಳು ಬೆಂಕಿಯಿಂದ ಧಗಧಗಿಸಿವೆ. ವಾಹನಗಳು ಯಾವುದೇ ಕೆಲಸಕ್ಕೆ ಬಾರದ ರೀತಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎನ್ನಲಾಗಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬಂದು ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬಸ್​ ಅಪಘಾತದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಪ್ರತಿಕ್ರಿಸಿದ್ದು ಇದೊಂದು ಭಯಾನಕ ದುರಂತ ಎಂದಿದ್ದಾರೆ. ಜೀವ ಕಳೆದುಕೊಂಡ ಎಲ್ಲರಿಗೂ ಸಂತಾಪ ಸೂಚಿಸಿದ್ದಾರೆ.