ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ ; ಥೈಲ್ಯಾಂಡ್ ಮಹಿಳೆಯರು ಸೇರಿದಂತೆ 44 ಮಹಿಳೆಯರ ರಕ್ಷಣೆ ; ಆರೋಪಿ ಅಂದರ್- ಕಹಳೆ ನ್ಯೂಸ್
ಅನಿಲ್ ಕುಮಾರ್ ರೆಡ್ಡಿ ಬಂಧಿತ ಆರೋಪಿ. ಈತ ಸ್ಪಾಗಳಲ್ಲಿ ದಂಧೆ ನಡೆಸುತ್ತಿದ್ದ, ಹೊರರಾಜ್ಯಗಳಿಂದ ಯುವತಿಯರನ್ನ ಕರೆಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಸದ್ಯ ಆರೋಪಿ ವಿರುದ್ಧ ಮಾನವ ಕಳ್ಳಸಾಗಣೆ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ. ಗೂಂಡಾಕಾಯ್ದೆ ಅಡಿ ಬಂಧಿಸಿದ್ದು, ಬಳ್ಳಾರಿ ಜೈಲಿಗಟ್ಟುವಂತೆ (Bellary Jail) ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಸಿಕ್ಕಿಬಿದ್ದದ್ದು ಹೇಗೆ?
ಕಳೆದ ಜನವರಿಯಲ್ಲೇ ಕೆ.ಆರ್ ಪುರದ ಟಿನ್ ಫ್ಯಾಕ್ಟರಿ ಬಳಿಯಿದ್ದ ನಿರ್ವಣ ಇಂಟರ್‌ನ್ಯಾಷನಲ್ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಥೈಲ್ಯಾಂಡ್ ಮಹಿಳೆಯರು ಸೇರಿದಂತೆ 44 ಮಹಿಳೆಯರನ್ನ ರಕ್ಷಣೆ ಮಾಡಲಾಗಿತ್ತು. ದಾಳಿ ಬಳಿಕ ಸ್ಪಾ ಅನ್ನು ಬಂದ್ ಮಾಡಲಾಗಿತ್ತು.
ಇನ್ನೂ ಆರೋಪಿಯು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಯುವತಿಯರನ್ನ ಕರೆಸುತ್ತಿದ್ದ. ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕರೆಸಿ ಬಂದು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಅನಿಲ್ ರೆಡ್ಡಿ ವಿರುದ್ಧ ರೇಪ್ ಸೇರಿ ಇತರೇ ಪ್ರಕರಣಗಳು ದಾಖಲಾಗಿದ್ದರಿಂದ, ಮಹದೇವಪುರ ಪೊಲೀಸರು ಗೂಂಡಾ ಕಾಯ್ದೆ ರಿಪೋರ್ಟ್ ತಯಾರಿಸಿದ್ದರು. ವರದಿ ಆಧರಿಸಿ ಪೊಲೀಸ್ ಆಯುಕ್ತರು ಅನಿಲ್ ರೆಡ್ಡಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ ಎಂದು ಪೊಲೀಸರು ಕಂಪ್ಲೀಟ್ ಮಾಹಿತಿ ನೀಡಿದ್ದಾರೆ.