Thursday, December 26, 2024
ಕ್ರೈಮ್ರಾಜ್ಯಸುದ್ದಿ

ಬಲವಂತವಾಗಿ ಮತಾಂತರ ;ಲವ್ ಜಿಹಾದ್‌ಗೆ ಯುವತಿ ಬಲಿ -ಕಹಳೆ ನ್ಯೂಸ್

ಉತ್ತರ ಪ್ರದೇಶ- ಗಾಜಿಯಾಬಾದ್ ಜಿಲ್ಲೆಯಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಯುವತಿ. ಕವಿನಗರದ ಫರಾಜ್ ಅತ್ತಾರ ಎಂಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಮತ್ತು ಆಕೆಯನ್ನು ಬಲವಂತವಾಗಿ ಮತಾಂತರಿಸಿದ್ದಾನೆ.

ಫರಾಜ್ ಆಕೆಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ವಂಚಿಸಿದ್ದನು. ಅವನು ಯುವತಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಿದ್ದನು. ಇದರಿಂದ ಮಾನಸಿಕವಾಗಿನೊಂದ ಯುವತಿ
ತನ್ನ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಮೃತ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫರಾಜ್ ಅತ್ತಾರ ಹಾಗೂ ಆತನ ಸಂಬAಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಯುವತಿಯ ತಂದೆ ಕೋಟ್ಯಾಧಿಪತಿಯಾಗಿದ್ದು ಅವರ ಆಸ್ತಿಯೆಲ್ಲ ಈ ಯುವತಿಯ ಹೆಸರಿನಲ್ಲಿತ್ತು. ಈ ಆಸ್ತಿಯನ್ನು ದೋಚುವ ಸಲುವಾಗಿ ಫರಾಜ್ ಈ ಹಿಂದೂ ಯುವತಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದನು. ನಾನು ಅವಿವಾಹಿತನೆಂದು ಹೇಳಿ ಆಕೆಗೆ ಮದುವೆಯ ಭರವಸೆ ನೀಡಿದ್ದನು. ಫರಾಜ್ ಯುವತಿಯ ಜೊತೆ ದೈಹಿಕ ಸಂಬAಧ ಹೊಂದಿದ್ದನು. ಅನೇಕ ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದನು. ಅಲ್ಲದೇ ಯುವತಿಯನ್ನು ಮತಾಂತರಿಸಲು ಇಸ್ಲಾಂ ಪುಸ್ತಕವನ್ನು ಓದುವಂತೆ ಒತ್ತಾಯಿಸುತ್ತಿದ್ದನು. ಆಸ್ತಿಯೆಲ್ಲ ನನ್ನ ಹೆಸರಿಗೆ ಬಂದ ನಂತರವೇ ಮದುವೆಯಾಗುತ್ತೇನೆ ಎಂದು ಡಿಸೆಂಬರ್ 10ರಂದು ಆ ಹಿಂದೂ ಯುವತಿಗೆ ಷರತ್ತು ಹಾಕಿದ್ದನು. ಇದರಿಂದ ನೊಂದ ಯುವತಿ ಡಿಸೆಂಬರ 11ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

ಜಾಹೀರಾತು
ಜಾಹೀರಾತು
ಜಾಹೀರಾತು