ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಂಭುರು ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ಲಾಭಂಶ ವಿತರಣೆ ಕಾರ್ಯಕ್ರಮ – ಕಹಳೆ ನ್ಯೂಸ್
ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಪಾಣೆಮಂಗಳೂರು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಶಂಭುರು ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ಲಾಭಂಶ ವಿತರಣೆ ಕಾರ್ಯಕ್ರಮ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಪ್ಪ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭುರಿನಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಆನಂದ ಎ ಭಾಗವಹಿಸಿ. ಯೋಜನೆಯ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಅನುಷ್ಠಾನ ಮಾಡಿಕೊಂಡು ತನ್ನ ವೈಯಕ್ತಿಕ ಜೀವನದ ಅಭಿವೃದ್ಧಿ ಜೊತೆಗೆ ಸಾಮಾಜಿಕವಾಗಿ ವೃತ್ತಿ ಬದುಕಿನಲ್ಲಿ ಉತ್ತಮ ಸೇವೆ ಮಾಡುವ ಮಾಹಿತಿ ಮಾರ್ಗದರ್ಶನ ಸಂಸ್ಥೆಯ ಮೂಲಕ ನಡೆಯುತಿದ್ದು ಇದಕ್ಕೆ ಇದಕ್ಕೆ ನಾವೆಲ್ಲರೂ ಒಟ್ಟಾಗಿ ಭಾಗವಹಿಸಿ, ನಮ್ಮ ಗ್ರಾಮಕ್ಕೆ ಹಾಗೂ ದೇವಸ್ಥಾನ ಇತರ ಸಾರ್ವಜನಿಕ ಕ್ಷೇತ್ರಕ್ಕೆ ಯೋಜನೆಯಿಂದ ಸಹಕಾರವು ಲಭಿಸಿದ್ದು ಇದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ಮುಂದೆಯೂ ಕ್ಷೇತ್ರದ ಸಹಕಾರ ಇರಲಿ ಎಂದರು
ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾcccc ಜಯಾನಂದ ಪಿ ಯೋಜನೆ ಕಾರ್ಯಕ್ರಮದ ಬಗ್ಗೆ ಹಾಗೂ ಯೋಜನೆಯ ಮೂಲಕ ನಡೆಯುವಂತಹ ಕಾರ್ಯಕ್ರಮದ ಬಗ್ಗೆ ಹಾಗೂ ತಾಲೂಕಿನಲ್ಲಿ 2,300 ಸಂಘಗಳಿಗೆ ಐದು ಕೋಟಿ ರೂಪಾಯಿಲಾಭಂಶ ಬಂದಿದ್ದು ಇದರ ವಿತರಣೆಯನ್ನು ಮಾಡುತಿದ್ದು ಅದನ್ನು ಉತ್ತಮ ಕೆಲಸಕ್ಕೆ ಉಪಯೋಗಿಸಿ ಸಂಘದಿಂದ ಪಡೆಕೊಂಡ ಸಾಲವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗ ಮಾಡಿ ಯೋಜನೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿಕೊಂಡು ಬನ್ನಿ ಎಂದರು. ಈ ಸಂದರ್ಭದಲ್ಲಿ ಶಂಬೂರು ಒಕ್ಕೂಟದ 35 ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಮೋಹಿನಿ, ಸದಸ್ಯರಾದ ಪ್ರಕಾಶ್ ಮಡಿ ಮುಗೇರು, ಜನಜಾಗೃತಿ ಸದಸ್ಯರಾದ ಪುರುಷೋತ್ತಮ ನಾಟಿ,ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರುಗಳಾದ ವಾಮನ ಕುಲಾಲ್, ಹೇಮಾಲತಾ, ವಲಯ ಮೇಲ್ವಿಚಾರರಾದ ಅಮಿತಾ, ಒಕ್ಕೂಟದ ಸೇವಾಪ್ರತಿನಿಧಿ ಲಕ್ಷ್ಮಿ, ಒಕ್ಕೂಟದ ಪದಾಧಿಕಾರಿಗಳಾದ ಬಬಿತ, ನಳಿನಿ, ಲಿಖಿತ ಉಪಸ್ಥಿತರಿದ್ದರು.