Wednesday, December 25, 2024
ಸುದ್ದಿ

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ ಗ್ಲೋ ಫೆಸ್ಟ್ : ಡಿ.23 ರಿಂದ ಜ.26ವರೆಗೆ ವೈವಿಧ್ಯಮಯ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ ಡಿ.23 ರಿಂದ ಜ.26ವರೆಗೆ ವೈವಿಧ್ಯಮಯ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ “ಗ್ಲೋ ಫೆಸ್ಟ್” ಕಾರ್ಯಕ್ರಮ ನಡೆಯಲಿದೆ.

ಡಿ.23ರಂದು “ಗ್ಲೋ ಫೆಸ್ಟ್” ಕಾರ್ಯಕ್ರಮವನ್ನು ದರ್ಬೆ ಗಣೇಶ್ ಟ್ರೇರ‍್ಸ್ ನ ಮಾಲಕರಾದ ವಾಮನ್ ಪೈಯವರ ಪತ್ನಿ ಶ್ರೀಮತಿ ಅನುರಾಧ ವಾಮನ್ ಪೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಮಾತನಾಡಿ, ಮಹಿಳೆಯರಿಗೆ ಚಿನ್ನಾಭರಣಗಳಲ್ಲಿ ವ್ಯಾಮೋಹವಿದ್ದರೂ ಹೂಡಿಕೆ ದೃಷ್ಟಿಯಿಂದ ಬಹಳಷ್ಟು ಉಪಯುಕ್ತವಾಗಿದೆ. ಹೀಗಾಗಿ ಚಿನ್ನಾಭರಣಗಳ ಉದ್ಯಮಕ್ಕೆ ವಿಶೇಷ ಮಾನ್ಯತೆ ಇದೆ. ಪುತ್ತೂರಿನಲ್ಲಿ ಮನೆ ಮಾತಾಗಿರುವ ಚಿನ್ನಾಭರಣಗಳ ಮಳಿಗೆ ಹಲವು ವರ್ಷಗಳಿಂದ “ಗ್ಲೋ ಫೆಸ್ಟ್” ಆಯೋಜಿಸುತ್ತಿದ್ದು ಹೆಸರಿನಂತೆ ಹೊಳಪಿನಿಂದ ಪ್ರಕಾಶ ಮಾನವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಬಲರಾಮ ಆಚಾರ್ಯ, ದಕ್ಷ ಕನ್‌ಸ್ಟ್ರಕ್ಷನ್ ನ ಮಾಲಕರಾದ ರವೀಂದ್ರರವರ ಪತ್ನಿ ಶ್ರೀಮತಿ ಉಷಾ ರವೀಂದ್ರ, ಲಕ್ಷ್ಮೀಕಾಂತ್ ಅಚಾರ್ಯ, ಶ್ರೀಮತಿ ವೇದ ಲಕ್ಷ್ಮೀಕಾಂತ್ ಆಚಾರ್ಯ, ಸ್ನೇಹ ಸಿಲ್ಕ್÷್ಸ ನ ಮಾಲಕ ಸತೀಶ್‌ರವರ ಪತ್ನಿ ಶ್ರೀಮತಿ ಹರಿಣಿ ಸತೀಶ್, ಪಾಲುದಾರರಾದ ಸುಧನ್ವ ಆಚಾರ್ಯ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕೀರ್ತನ್, ಶೋರೂಂ ಮ್ಯಾನೇಜರ್ ಪುರಂದರ್ , ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಿಬ್ಬಂಧಿ ಭಾರ್ಗವ್ ಗೋಖಲೆ ಕಾರ್ಯಕ್ರಮ ನಿರೂಪಿಸಿ, ಸಿಬಂದಿಗಳಾದ ವಿಜಯ, ವೀಣಾ, ಚಂದ್ರಿಕಾ ಹಾಗೂ ಪವಿತ್ರ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.