Friday, September 20, 2024
ಸುದ್ದಿ

ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಸತತ ನಾಲ್ಕನೇ ಬಾರಿಗೆ ಸಹಕಾರ ಭಾರತಿ ತೆಕ್ಕೆಗೆ – ಕಹಳೆ ನ್ಯೂಸ್

ಮುಳ್ಳೇರಿಯ : ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಎಲ್ಲಾ ಸ್ಥಾನಗಳಲ್ಲೂ ಪ್ರಚಂಡ ಬಹುಮತಗಳೊಂದಿಗೆ ಜಯಿಸಿದೆ.

ಒಟ್ಟು 10667 ಮತಗಳು ಚಲಾವಣೆಯಾಗಿದ್ದು ಅದರಲ್ಲಿ 44ಮತಗಳು ಅಸಿಂಧುವಾಗಿದೆ. ಚುನಾವಣಾಧಿಕಾರಿ ಮನೋಜ್ ಪಲಿತಾಂಶವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಇನ್ನಿತರ ಚುನಾವಣಾಧಿಕಾರಿಗಳು, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಎ.ಬಿ ಗಂಗಾಧರ ಬಲ್ಲಾಳ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಸಹಕಾರ ಭಾರತಿಯಿಂದ ಸ್ಪರ್ಧಿಸಿದ ಸುಬ್ರಹ್ಮಣ್ಯ ಕಡಂಬಳಿತ್ತಾಯ, ಜಯಕರ ಎಂ, ಆಶೀರ್ವಾದ್ ಎಚ್.ಎಸ್, ಹರೀಶ್ ಶೆಟ್ಟಿ ಬಿ., ವಿದ್ಯಾಲತ, ಲಂಬೋದರ ಬಿ.ಜಿ., ಸುಂದರರಾಜ್ ರೈ ಪಂಬುಡೆ, ಸುರೇಖಾ ಪಿ., ಪ್ರಶಾಂತಿ ಪಿ.ನಾಯ್ಕ್ ವಿಜಯ ಗಳಿಸಿದ್ದಾರೆ. ಯುಡಿಎಫ್ ನಿಂದ ಸಾಮಾನ್ಯ ವಿಭಾಗದಿಂದ 4 ಹಾಗೂ ಮಹಿಳಾ ವಿಭಾಗದಿಂದ 2 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಒಟ್ಟು 11 ಸ್ಥಾನಗಳಲ್ಲಿ ನಿಕ್ಷೇಪದಾರರ ಮೀಸಲಾತಿ ವಿಭಾಗದಿಂದ ಸುಬ್ರಹ್ಮಣ್ಯ ಭಟ್ ಹಾಗೂ ಎಸ್ ಸಿ/ಎಸ್ ಟಿ ಮೀಸಲಾತಿ ವಿಭಾಗದಿಂದ ಚೋಮ ನಾಯ್ಕ್(ಅಶೋಕ್) ಅವಿರೋಧವಾಗಿ ಆಯ್ಕೆಯಾಗಿದ್ದರು. ಸತತ ನಾಲ್ಕನೇ ಬಾರಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯು ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕಿನಆಡಳಿತ ಚುಕ್ಕಾಣಿಯನ್ನು ಹಿಡಿದಿದೆ.

ಜಾಹೀರಾತು

ವೈಭವದ ವಿಜಯೋತ್ಸವ:


ಸಹಕಾರ ಭಾರತಿ ರಾಷ್ಟ್ರೀಯ ಸಮಿತಿಯ ಸದಸ್ಯ ಐತ್ತಪ್ಪ ಮವ್ವಾರು, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣಪತಿ ಕೋಟಕಣಿ, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ಬಿ.ಜೆ.ಪಿ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಯಂ. ಸಂಜೀವ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕರೂ ಹಾಗೂ ಬಿ.ಜೆ.ಪಿ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಬಿ.ಜೆ.ಪಿ ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಬಿ.ಜೆ.ಪಿ ಕಾರಡ್ಕ ಪಂಚಾಯತ್ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ, ಹಿಂದೂ ಐಕ್ಯವೇದಿಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಉಡುಪ, ಹಿರಿಯ ನೇತಾರ ಶ್ರೀಧರ ರಾವ್, ಬೆಳ್ಳೂರು ಪಂಚಾಯಿತಿನ ಸಂಘ ಪರಿವಾರ ಸಂಘಟನೆಯ ನೇತಾರರು ವಿಜಯೋತ್ಸವದಲ್ಲಿ ಭಾಗವಹಿಸಿದರು.

ವಿಜಯಿಗಳಾದ ಸಹಕಾರಿ ಭಾರತಿಯ ಎಲ್ಲಾ ಅಭ್ಯರ್ಥಿಗಳೂ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ವಾಧ್ಯಘೋಷಗಳೊಂದಿಗೆ ಪಾದಯಾತ್ರೆ ತೆರಳಿ, ಪ್ರಾರ್ಥಿಸಿ ವಿಜಯೋತ್ಸವವನ್ನು ಆಚರಿಸಿದರು. ನಂತರ ನಾಟೆಕಲ್ಲು, ಬಸ್ತಿ, ಪಳ್ಳಪ್ಪಾಡಿ, ನೆಟ್ಟಣಿಗೆ, ಕಿನ್ನಿಂಗಾರು, ಬೀಜದಕಟ್ಟೆ, ಕಾಯರ್ಪದವು ಪ್ರದೇಶಗಳಿಗೆ ವಾಹನಜಾಥದೊಂದಿಗೆ ತೆರಳಿ ಸಂಭ್ರಮಾಚರಣೆ ಮಾಡಿದರು.


ಅಭಿನಂದನೆ :
ಬಿಜೆಪಿ ರಾಜ್ಯ ಸಮಿತಿಯ ಸದಸ್ಯ ರವೀಶ ತಂತ್ರಿ ಕುಂಟಾರು, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಡ್ವ. ಕೆ ಶ್ರೀಕಾಂತ್, ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್ ನಾರಂಪಾಡಿ, ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಬಲೆಕ್ಕಳ ವಿಜಯಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.