ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿದ ಅಂಬಿಕಾ ವಿದ್ಯಾರ್ಥಿನಿಗೆ ಅಭಿನಂದನೆ -ಕಹಳೆ ನ್ಯೂಸ್
ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯು ಗುಜರಾತ್‌ನ ರಾಜಕೋಟ್‌ನಲ್ಲಿ ನ.24ರಿಂದ 30ರ ವರೆಗೆ ನಡೆಸಿದ 68ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಗರದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರನ್ನು ಸಂಸ್ಥೆಯ ವತಿಯಿಂದ ಗುರುವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಪುತ್ತೂರಿನ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ.ಎನ್. ಶೆಣೈಯವರ ಪುತ್ರಿಯಾದ ಇವರು ರಾಜ್‌ಕೋಟ್‌ನ ಸರ್ದಾರ್ವಲ್ಲಭಬಾಯಿ ಪಟೇಲ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ತೃತೀಯ ಸ್ಥಾನ
ಪಡೆದಿದ್ದಾರೆ. ಕೇಂದ್ರ ಸರ್ಕಾರ ಆಯೋಜಿಸುವ ಈ ಸ್ಪರ್ಧೆಯಲ್ಲಿ ದೇಶದೆಲ್ಲೆಡೆಯಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಈಜುಪಟುಗಳು ಭಾಗವಹಿಸಿದ್ದರು. ಕಳೆದ 67 ವರ್ಷಗಳಿಂದ ಕೇಂದ್ರ ಸರ್ಕಾರವು ಈ ಸ್ಪರ್ಧೆಯನ್ನು ಆಯೋಜಿಸುತ್ತಾ ಬರುತ್ತಿದೆ.
ಇದಲ್ಲದೆ ಪ್ರತೀಕ್ಷಾ ಶೆಣೈ ಅವರು ಕರ್ನಾಟಕ ಸ್ವಿಮ್ಮಿಂಗ್ ಪೂಲ್ (ಕೆಎಸ್‌ಎ), ಬೆಂಗಳೂರು ಬಸವನಗುಡಿಯ ಈಜುಕೊಳದಲ್ಲ್ಲಿ ಆಯೋಜಿಸಿದ ಸ್ಪರ್ಧೆಯ 50 ಮೀ, 100 ಮೀ ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಕ್ರಮವಾಗಿ 2 ಚಿನ್ನ, 1 ಕಂಚು ಪದಕ ಗೆದ್ದು ಸಾಧನೆ ಮೆರೆದಿದ್ದಾರೆ. ಅಲ್ಲದೇ 35.88 ಸೆಂಕೆಡ್ ಅವಧಿಯಲ್ಲಿ ಈಜಿ 10 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ವಿಕ್ರಮ ಸಾಧಿಸಿದ್ದಾರೆ.
ಈ ಎಲ್ಲ ಸಾಧನೆಗಾಗಿ ಪ್ರತೀಕ್ಷಾ ಶೆಣೈ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸನ್ಮಾನಿಸಿದರು. ಉಪಪ್ರಾಂಶುಪಾಲೆ ಶೈನಿ ಕೆ ಜೆ, ಉಪನ್ಯಾಸಕ ಯತೀಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರದೀಪ್ ಕೆ ವೈ ವಿಶ್ಲೇಷಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.