Wednesday, December 25, 2024
ದಕ್ಷಿಣ ಕನ್ನಡಮಂಗಳೂರುರಾಜಕೀಯಸುದ್ದಿ

ಇನ್ನುಮುಂದೆ ಅಧಿವೇಶನದ ಬಳಿಕ “ಸಂಸದರೊಂದಿಗೆ ಸಂಸತ್ತಿನ ಸಂವಾದ” ಕಾರ್ಯಕ್ರಮ: ಸಂಸದ ಕ್ಯಾ. ಚೌಟ

ಮಂಗಳೂರು: ಪ್ರತಿಪಕ್ಷವಾದ ಕಾಂಗ್ರೆಸ್‌ ಸಂಸತ್ತು ಅಧಿವೇಶನದ ಕಲಾಪಗಳಿಗೆ ಅಡ್ಡಿಪಡಿಸುವುದನ್ನೇ ಒಂದು ಛಾಳಿಯಾಗಿ ಮಾಡಿಕೊಂಡಿದೆ. ಸುಗಮವಾಗಿ ನಡೆಯುವ ಸಂಸತ್‌ ಅಧಿವೇಶನವನ್ನು ಹೈಜಾಕ್‌ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮದ ಜತೆಗೆ ನಡೆದ “ಸಂಸದರೊಂದಿಗೆ ಸಂಸತ್ತಿನ ಸಂವಾದ”ದಲ್ಲಿ ಮಾತನಾಡಿದ ಅವರು, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಕುರಿತಂತೆ ಕಲಾಪದಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಜತೆಗೆ, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಅಭಿವೃದ್ಧಿ ವಿಚಾರಗಳ ಕುರಿತಂತೆ ಆಯಾ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ನೀಡಲಾಗಿದೆ. ಎಲ್ಲ ವಿಚಾರಗಳಿಗೆ ಸಚಿವರು-ಅಧಿಕಾರಿಗಳ ಮಟ್ಟದಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸದರೊಂದಿಗೆ ಸಂಸತ್ತಿನ ಸಂವಾದ

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನುಮುಂದೆ ಪ್ರತಿ ಬಾರಿಯೂ ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಮಾಧ್ಯಮದ ಜತೆಗೆ ʼಸಂಸದರೊಂದಿಗೆ ಸಂಸತ್ತಿನ ಸಂವಾದʼ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆ ಮೂಲಕ ನನ್ನ ಕ್ಷೇತ್ರದ ಮತದಾರರಿಗೆ ಅಧಿವೇಶನದಲ್ಲಿ ಏನೆಲ್ಲ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ ಹಾಗೂ ಅದಕ್ಕೆ ಸಂಬಂಧಿಸಿದ ಪೂರಕ ವಿಚಾರಗಳನ್ನು ಹಂಚಿಕೊಳ್ಳುವುದು ಈ ಸಂವಾದ ಕಾರ್ಯಕ್ರಮದ ಆಶಯವಾಗಿದೆ. ಇದಕ್ಕೆ ಎಲ್ಲ ಮಾಧ್ಯಮದವರ ಸಹಕಾರವನ್ನು ಬಯಸುತ್ತಿದ್ದು, ಎಲ್ಲರೂ ಒಟ್ಟಾಗಿ ಕೈಜೋಡಿಸಿದಾಗ ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡದ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ನ.25ರಿಂದ ಡಿಸೆಂಬರ್‌ 20ರವರೆಗೆ ನಡೆದಿದ್ದು, ನಾನು ಒಟ್ಟು 19 ಪ್ರಶ್ನೆಗಳನ್ನು ಬೇರೆ-ಬೇರೆ ಸಚಿವರಿಗೆ ಕೇಳಿದ್ದೆ. ಆ ಮೂಲಕ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದೇನೆ. ಜತೆಗೆ, ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಅಸಹಕಾರದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ನಡುವೆ ನಾಗರಿಕ ವಿಮಾನಯಾನ ಸಚಿವರು ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಕೂಡ ಖುದ್ದು ಭೇಟಿ ಮಾಡಿ ದಕ್ಷಿಣ ಕನ್ನಡದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ವಿಚಾರಗಳನ್ನು ಗಮನಕ್ಕೆ ತಂದು ಮನವಿಯನ್ನೂ ನೀಡಿದ್ದೇನೆ ಎಂದು ಸಂಸದರು ವಿವರಿಸಿದ್ದಾರೆ.

ಇನ್ನು ಅಧಿವೇಶನದಲ್ಲಿ ಪ್ರತಿಪಕ್ಷಗಳು ಕಲಾಪ ಸುಗಮವಾಗಿ ನಡೆಯದಂತೆ ಅಡ್ಡಿಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಈ ಚಳಿಗಾಲದ ಅಧಿವೇಶನದುದ್ದಕ್ಕೂ ಪ್ರತಿಪಕ್ಷವಾದ ಕಾಂಗ್ರೆಸ್‌ ಸದಸ್ಯರು ಸದನದ ಒಳಗೆ ಹಾಗೂ ಹೊರಗೆ ಬಹಳ ಅಸಹ್ಯ ರೀತಿಯ ವರ್ತನೆ ತೋರಿಸಿದ್ದಾರೆ. ಈ ದೇಶದ ಜನರು ಸಾಕಷ್ಟು ನಿರೀಕ್ಷೆಗಳೊಂದಿಗೆ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದಾರೆ. ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ, ಬೇಡಿಕೆಗಳು, ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಕಾಂಗ್ರೆಸ್‌ ಸಂಸದರು ಸಂಸತ್ತು ಆವರಣದಲ್ಲಿ ಪ್ರತಿಭಟನೆ ಹೆಸರಿನಲ್ಲಿ ಕಾಲಾಹರಣ ಮಾಡಿ ಸಾಕಷ್ಟು ಹೈಡ್ರಾಮಾ ಮಾಡಿದ್ದಾರೆ. ತಮ್ಮ ವರ್ತನೆಯನ್ನು ಭಾರತ ದೇಶದ ಜನರು ಗಮನಿಸುತ್ತಿದ್ದಾರೆ ಎನ್ನುವ ಪರಿಜ್ಞಾನವೂ ಇಲ್ಲದೆ ಅಧಿವೇಶನದುದ್ದಕ್ಕೂ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತ ಸಂವಿಧಾನದ ಅತ್ಯಂತ ಪವಿತ್ರ ಸ್ಥಳವಾಗಿರುವ ಸಂಸತ್‌ ಆವರಣದಲ್ಲೇ ತಮ್ಮನ್ನು ಆಯ್ಕೆಗೊಳಿಸಿರುವ ಮತದಾರರೇ ತಲೆತಗ್ಗಿಸುವಂಥ ಕೃತ್ಯ ಎಸಗಿದ್ದಾರೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.