
ನವದೆಹಲಿ: ಭಾರತೀಯ ರೈಲ್ವೆಯ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್ ಫಾರಂ, ಐಆರ್ ಸಿಟಿಸಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಪರಿಣಾಮ ಗುರುವಾರ (ಡಿ.26) ಪ್ರಯಾಣಿಕರು ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ನಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.
‘ನಿರ್ವಹಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಈ ತಾಂತ್ರಿಕ ಸಮಸ್ಯೆ ಎದುರಾಗಿರುವುದಾಗಿ ಐಆರ್ ಸಿಟಿಸಿ” ಪ್ರಕಟನೆ ತಿಳಿಸಿದೆ.
ನಿರ್ವಹಣಾ ಚಟುವಟಿಕೆ ನಿಟ್ಟಿನಲ್ಲಿ ಇ-ಟಿಕೆಟಿಂಗ್ ಸೇವೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎಂಬ ಸಂದೇಶ ಐಆರ್ ಸಿಟಿಸಿ ವೆಬ್ ಸೈಟ್ ಸಂದೇಶ ತಿಳಿಸಿದೆ. ಆನ್ ಲೈನ್ ಟಿಕೆಟಿಂಗ್ ಸೇವೆ ದೊರಕುತ್ತಿಲ್ಲ ಎಂದು 2,500ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿರುವುದಾಗಿ ಡೌನ್ ಡಿಟೆಕ್ಟರ್ ಅಂಕಿಅAಶ ವಿವರಿಸಿದೆ.
ವರ್ಷಾಂತ್ಯದ ರಜೆಯ ಹಿನ್ನೆಲೆಯಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡುವಂತಾಗಿದೆ. ಲಕ್ಷಾಂತರ ಪ್ರಯಾಣಿಕರು ತಮ್ಮ ರೈಲು ಟಿಕೆಟ್ ಅನ್ನು ಕಾಯ್ದರಿಸಲು ಇ ಪ್ಲಾಟ್ ಫಾರಂ ಅನ್ನು ಅವಲಂಬಿಸಿದ್ದಾರೆ.
ಇ ಟಿಕೆಟಿಂಗ್ ಪ್ಲಾಟ್ ಫಾರಂ ತಾಂತ್ರಿಕ ದೋಷ ಎದುರಿಸುತ್ತಿರುವುದು ಡಿಸೆಂಬರ್ ತಿಂಗಳಿನಲ್ಲಿ ಇದು ಎರಡನೇ ಬಾರಿಯಾಗಿದೆ ಎಂದು ವರದಿ ತಿಳಿಸಿದೆ.
“ತಮ್ಮ ಟಿಕೆಟ್ ಅನ್ನು ರದ್ದುಪಡಿಸಲು ಬಯಸುವ ಪ್ರಯಾಣಿಕರು ಕಸ್ಟಮರ್ ಕೇರ್ ಗೆ ಕರೆ ಮಾಡಿ ತಿಳಿಸಬಹುದು ಅಥವಾ ಟಿಕೆಟ್ ಠೇವಣಿ ರಶೀದಿಗಾಗಿ ತಮ್ಮ ಟಿಕೆಟ್ ನ ವಿವರಗಳನ್ನು ಇ ಮೇಲ್ ಮಾಡಬಹುದು ಎಂದು” ಐಆರ್ ಸಿಟಿಸಿ ಸಲಹೆ ನೀಡಿದೆ. (ಸಂಪರ್ಕ ವಿವರ: Iಖಅಖಿಅ 14646, 08044647999, 08035734999 ಅಥವಾ etickets@irctc.co.in)