ಕಾಸರಗೋಡು : ಕಾಸರಗೋಡಿನ ಕುಂಬಳೆಯಲ್ಲಿ ಡಿ.26 ರಂದು ಕಾಡು ಹಂದಿಯೊAದು ಸೂಪರ್ ಮಾರ್ಕೆಟ್ ಗೆ ನುಗ್ಗಿದ ಘಟನೆ ನಡೆದಿದೆ.
ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಕಾಡು ಹಂದಿ ನುಗ್ಗಿದೆ. ಈ ಸಂದರ್ಭದಲ್ಲಿ ಮಾರ್ಕೆಟ್ ಒಳಗೆ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು.
ಅನಿರೀಕ್ಷಿತವಾಗಿ ಒಳಗೆ ಬಂದು ಗ್ರಾಹಕನನ್ನು ಕಂಡು ಗಲಿಬಿಲಿಗೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ ಹೋಗಿದೆ.ಎಂದು ತಿಳಿದು ಬಂದಿದೆ.