ಬೆಳ್ತಂಗಡಿ: ‘ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ರಕ್ಷಣೆಗಾಗಿ ಕಷ್ಟ ಪಡುತ್ತಿದ್ದರೂ ಅವರಿಗೆ ಕನಿಷ್ಠ ವೇತನ ಜಾರಿ ಮಾಡದಿರುವುದು ವಿಷಾದನೀಯ’ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷೆ ದೇವಕಿ, ಉಪಾಧ್ಯಕ್ಷೆ ರೂಪಾ, ಸಿಐಟಿಯುನ ರಾಮಚಂದ್ರ, ಡಿವೈಎಫ್‌ಐನ ಅಭಿಷೇಕ್ ಭಾಗವಹಿಸಿದ್ದರು.
ರೇಖಾ ಸ್ವಾಗತಿಸಿ, ಭವಾನಿ ವಂದಿಸಿದರು.
ಸಮಾವೇಶದ ಬಳಿಕ ಸಂಘದ ಪದಾಧಿಕಾರಿಗಳ ನಿಯೋಗ ತಾಲ್ಲೂಕು ಆರೋಗ್ಯ ಅಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ, ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಆಶಾ ಕಾರ್ಯಕರ್ತೆಯರ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ದೇವಕಿ ಕಳೆಂಜ, ಅಧ್ಯಕ್ಷರಾಗಿ ರೇಖಾ ಕುದ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ ಕುತ್ಲೂರು, ಖಜಾಂಜಿಯಾಗಿ ಸರಸ್ವತಿ ನಾರ್ಯ, ಉಪಾಧ್ಯಕ್ಷರಾಗಿ ಲಲಿತ ಮಚ್ಚಿನ, ಹರಿಣಾಕ್ಷಿ ಪುದುವೆಟ್ಟು, ಸಹಕಾರ್ಯದರ್ಶಿಗಳಾಗಿ ದಯಾಶ್ರೀ ಶಿಬಾಜೆ, ಶಾಹಿರಾಬಾನು ಪಣಕಜೆ, ಕಾನೂನು ಸಲಹೆಗಾರರಾಗಿ ಸಿಐಟಿಯು ಮುಖಂಡ ಬಿ.ಎಂ.ಭಟ್, ಸಮಿತಿ ಸದಸ್ಯರಾಗಿ ಮಂಗಳ ಬಳಂಜ, ಕವಿತ ಹತ್ಯಡ್ಕ, ಪ್ರೇಮ ಕಾಶಿಪಟ್ಣ, ಶಾರದಾ ಕೆ.ಕಣಿಯೂರು ಆಯ್ಕೆಯಾದರು.