ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ;ದೈನಂದಿನ ಜೀವನದ ಎಲ್ಲಾ ಚಟುವಟಿಕೆಯಲ್ಲಿ ಗಣಿತ ಬೆರೆತುಹೋಗಿದೆ : ಸುಬ್ರಹ್ಮಣ್ಯ-ಕಹಳೆ ನ್ಯೂಸ್
ಪುತ್ತೂರು: ಶ್ರೇಷ್ಠ ಭಾರತೀಯ ಗಣಿತ ತಜ್ಞ ರಾಮಾನುಜನ್ ಅವರು ಗಣಿತದ ಬಗ್ಗೆ ಅಪಾರವಾಗಿ ಒಲವನ್ನು ಹೊಂದಿದ್ದವರು. ಸಂಖ್ಯೆಯ ವಿಭಾಗವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿ ತೋರಿಸಿದವರಲ್ಲದೇ, ಅನೇಕ ರೀತಿಯ ಪ್ರಮೇಯವನ್ನು ರಚಿಸಿದವರು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಬ್ರಹ್ಮಣ್ಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆಸಿದ ಗಣಿತ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯರು ತಿಳಿಯಪಡಿಸಿದ ವೇದಿಕ ಗಣಿತದಿಂದ ಅನೇಕ ರೀತಿಯ ಸಾಧನೆಗಳು ಸಾಧ್ಯ. ಅಲ್ಲದೆ, ಗಣಿತವು ನಮ್ಮ ಜೀವನದ ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಬೆರೆತು ಹೋಗಿದೆ ಎಂಬುದನ್ನು ಹಲವಾರು ನಿದರ್ಶನದ ಮೂಲಕ ಅವರು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಗಣಿತದ ಬಗ್ಗೆ ನಿಜವಾದ ಪ್ರೀತಿ ಇರಬೇಕು. ಇದರಿಂದ ನಾವು ನಮ್ಮ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದು ನುಡಿದರು. ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾ ಭಾರತಿಯವರು ಒಡಿಸ್ಸಾದಲ್ಲಿ ನಡೆಸಿದ ರಾಷ್ಟçಮಟ್ಟದ ಗಣಿತ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ 6ನೇ ತರಗತಿಯ ಸಾನ್ವಿ ತನ್ನ ಅನುಭವದ ಮಾತುಗಳನ್ನು ತಿಳಿಯಪಡಿಸಿದರು. 9ನೇ ತರಗತಿಯ ಸಹನಾ ರವರು ಗಣಿತ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಗಣಿತ ದಿನಾಚರಣೆಗೆ ಸಂಬAಧಿಸಿದAತೆ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಭಾರ್ಗವ್ ಸ್ವಾಗತಿಸಿ, ಪ್ರಮಥ್ ಕಾರ್ತಿಕ್ ವಂದಿಸಿದರು. ಸಾತ್ವಿಕ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಶಿಕ್ಷಕಿ ಕ್ರತಿಕಾ ರವರು ಬಹುಮಾನ ವಿತರಣಾ ಪಟ್ಟಿಯನ್ನು
ವಾಚಿಸಿದರು.