ಮಂಗಳೂರು ತಾಲೂಕು ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ-ಕಹಳೆ ನ್ಯೂಸ್
ಮಂಗಳೂರು: ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಇಂದು ಭಾರತೀಯ ಜನತಾ ಪಾರ್ಟಿಯ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಕೆ.ಮಹಾಬಲ ಸಾಲ್ಯಾನ್ , ಶಿವಪ್ರಸಾದ್ ಶೆಟ್ಟಿ , ತಾರಾನಾಥ ಸಪಲಿಗ , ರಾಜೇಶ್ ಶೆಟ್ಟಿ , ಶಿವಯ್ಯ ಗೌಡ , ಪರಿಶಿಷ್ಟ ಪಂಗಡ ಮೀಸಲಿನ ಸ್ಥಾನದಿಂದ ದಾಮೋದರ ನಾಯ್ಕ್ , ಪರಿಶಿಷ್ಟ ಜಾತಿ ಮೀಸಲಿನ ಸ್ಥಾನದಿಂದ ಹೊನ್ನಯ ಅಟ್ಟೆಪದವು , ಹಿಂದುಳಿದ ವರ್ಗ ಎ ಮೀಸಲಿನಿಂದ ಪ್ರಸಾದ್ ಎಡಪದವು , ಹಿಂದುಳಿದ ವರ್ಗ ಬಿ ಮೀಸಲಿನಿಂದ ಪ್ರವೀಣ್ ಆಳ್ವ ಗುಂಡ್ಯ , ಮಹಿಳಾ ಅಭ್ಯರ್ಥಿಯಾಗಿ ಪ್ರೇಮ ಹಾಗೂ ಜ್ಯೋತಿ , ಸಾಲಗಾರರಲ್ಲದ ಕ್ಷೇತ್ರಕ್ಕೆ ಕುಶಲ್ ಕುಮಾರ್ ಇವರು ನಾಮಪತ್ರ ಸಲ್ಲಿಸಿದರು.ಈ ಚುನಾವಣೆಯು ಕೊಳವೂರು, ಕಿಲೆಂಜಾರು, ತೆಂಕ ಎಡಪದವು, ಬಡಗ ಎಡಪದವು ಹಾಗೂ ಮುಚ್ಚೂರು ಗ್ರಾಮಗಳನ್ನು ಒಳಗೊಂಡಿದ್ದು ಚುನಾವಣೆಯು ಜನವರಿ 05 ರಂದು ನಡೆಯಲಿದೆ.
ಈ ಬಾರಿಯ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್ ನ ಪ್ರತಿಷ್ಠೆಯ ಹೋರಾಟವಾಗಿದ್ದು , ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಸದಸ್ಯರು ಅತೀ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸವಿದೆಯೆಂದು ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾಬಲ ಸಾಲ್ಯಾನ್ ರವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ .