Sunday, January 19, 2025
ಸುದ್ದಿ

ಸತ್ಯಶ್ರೀ ಫ್ರೆಂಡ್ಸ್ ಕ್ಲಬ್ ಬನ್ನೂರು ಕಬಡ್ಡಿ ತರಬೇತಿಗೆ ಅಶೋಕ್ ರೈ ಸಹಾಯ ಹಸ್ತ!

ಪುತ್ತೂರು : ಸತ್ಯಶ್ರೀ ಫ್ರೆಂಡ್ಸ್ ಕ್ಲಬ್ ಬನ್ನೂರು ಇದರ ವತಿಯಿಂದ ನಡೆಯುವ ಕಬಡ್ಡಿ ತರಬೇತಿ ಕಾರ್ಯಕ್ರಮಕ್ಕೆ ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿ ಧನಸಹಾಯ ನೀಡಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು,ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಅಭಿಲಾಷ್ ರೈ ಬನ್ನೂರು,ಪ್ರಧಾನ ಕಾರ್ಯದರ್ಶಿ ಜಯಕುಮಾರ್,ಗೌರವ ಸಲಹೆಗಾರ ನವೀನ್ ರೈ ಬನ್ನೂರು,ಗಣೇಶ್ ಆಚಾರ್ಯ ನೆಕ್ಕಿಲ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಬಳಿ ಜಾಗದ ದಾಖಲೆ ಸರಿಪಡಿಸಿಕೊಡುವಂತೆ ಮತ್ತು ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response