Saturday, January 4, 2025
ಜಿಲ್ಲೆಶುಭಾಶಯಸುದ್ದಿ

ಮ್ಯಾಕ್ಸ್’ ಯಶಸ್ಸಿನ ಬೆನ್ನಲ್ಲೆ ನಾಡದೇವಿ ದರ್ಶನ ಪಡೆದ ಅಭಿನಯ ಚಕ್ರವರ್ತಿ; ಚಾಮುಂಡೇಶ್ವರಿಗೆ ವಿಶೇಷ ಪೂಜೆ-ಕಹಳೆ ನ್ಯೂಸ್

ಮೈಸೂರು: ಮ್ಯಾಕ್ಸ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಸುದೀಪ್ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಕಿಚ್ಚ ಸುದೀಪ್ ಅವರು ಸಾಮಾನ್ಯವಾಗಿ ಪ್ರತಿವರ್ಷ ಮೈಸೂರಿನ ಚಾಮುಂಡಿ ದೇವಿ ದರ್ಶನ ಪಡೆಯುತ್ತಾರೆ. ಅದರಂತೆ ಈ ಸಲವೂ ಆಗಮಿಸಿದ್ದರು.

ಕಿಚ್ಚ ಸುದೀಪ್‌ಗೆ ಸ್ಥಳೀಯ ಮುಖಂಡರು, ಪ್ರಮುಖರು ಸಾಥ್ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ಸುದೀಪ್ ಆಗಮಿಸುತ್ತಿದ್ದಂತೆ ಅವರನ್ನು ನೋಡಲು, ಮಾತನಾಡಿಸಲು, ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಚಾಮುಂಡೇಶ್ವರಿ ದೇಗುಲದ ಹೊರಭಾಗದಲ್ಲಿ ಅವರು ಕಾರಿಂದ ಇಳಿಯುತ್ತಿದ್ದಂತೆ ಫ್ಯಾನ್ಸ್ ಸುತ್ತುವರಿದಿದ್ದರು. ಅಭಿಮಾನಿಗಳತ್ತ ಕೈಬೀಸಿ ದೇಗುಲದ ಒಳಗೆ ಹೋದ ಕಿಚ್ಚ ಸುದೀಪ್ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ತಮ್ಮ ಫೋನ್?ಗಳಲ್ಲಿ ನಟನ ಫೋಟೋ ತೆಗೆದುಕೊಂಡಿದ್ದಾರೆ. ಇನ್ನು ಸುದೀಪ್ ಅವರು ದೇವಾಲಯದ ಒಳಗೆ ಹೋಗುವಾಗ ಪುಟ್ಟ ಮಕ್ಕಳಿಗೆ ಶೇಕ್ ಹ್ಯಾಂಡ್ ಮಾಡಿರುವುದು ಮೆಚ್ಚುಗೆಗೆ ಕಾರಣವಾಯಿತು. ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಹೊರ ಬಂದ ಸುದೀಪ್ ಅವರು ಅಭಿಮಾನಿಗಳ ಕಡೆ ಕೈಬೀಸಿದರು. ಕೊನೆಯದಾಗಿ ಬೆಟ್ಟದಿಂದ ತೆರಳುವಾಗ ಕಾರು ಮೇಲೆ ಹತ್ತಿ ಸುತ್ತಲು ನಿಂತಿದ್ದ ಮತ್ತೆ ಫ್ಯಾನ್ಸ್?ಗೆ ಮತ್ತೊಂದು ಬಾರಿ ಫ್ಲೈಯಿಂಗ್ ಕಿಸ್ ಕೊಟ್ಟು, ಕೈ ಬೀಸಿ ತೆರಳಿದರು.