Wednesday, January 8, 2025
ಬೆಂಗಳೂರುರಾಜ್ಯಸುದ್ದಿ

ಮುಷ್ಕರಕ್ಕೆ ಮುಂದಾಗಿದ್ದ ಬಿಎಂಟಿಸಿ ನೌಕರರ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ಆಡಳಿತ ಮಂಡಳಿ..!- ಕಹಳೆ ನ್ಯೂಸ್

ಬೆಂಗಳೂರು: ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಡಿಸೆಂಬರ್31 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ, ನೌಕರರ ಮೇಲೆ ಇದೀಗ ಬಿಎಂಟಿಸಿ ಬ್ರಹ್ಮಾಸ್ತ್ರ ಬಳಸಿದೆ.

ಮುಂದಿನ ಆರು ತಿಂಗಳು ನೌಕರರು ಮುಷ್ಕರ ಮಾಡುವಂತಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ಅತ್ಯಾವಶ್ಯಕ ಸೇವೆಗಳ ಅಧಿನಿಯಮ 2013ರನ್ವಯ ಬಿಎಂಟಿಸಿ ಸೇವೆ ಅತ್ಯಾವಶ್ಯಕ ಸೇವೆ ಎಂದು ಪರಿಗಣನೆ ಮಾಡಲಾಗಿದೆ. ಮುಂದಿನ ಆರು ತಿಂಗಳು ನೌಕರರು ಮುಷ್ಕರ ಮಾಡುವಂತಿಲ್ಲ. ಜನವರಿ1 ರಿಂದ ಅನ್ವಯವಾಗುವಂತೆ ಆರು ತಿಂಗಳು ಬಿಎಂಟಿಸಿ ನೌಕರರ ಮುಷ್ಕರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಬಿಎಂಟಿಸಿ ಭದ್ರತಾ ಮತ್ತು ಜಾಗೃತಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರಿಗೆ ನೌಕರರ ಮೂಲ ವೇತನವನ್ನು ಶೇ. 25 ಹೆಚ್ಚಳ ಮಾಡಬೇಕು

ಸಾರಿಗೆ ನೌಕರರ ಮೂಲ ವೇತನವನ್ನು 25 ಪ್ರತಿಶತ ಹೆಚ್ಚಳ ಮಾಡಬೇಕು, ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಇನ್ನೂ 5,010 ಕೋಟಿ ರೂಪಾಯಿ ನೀಡಬೇಕಿದೆ. ಶಕ್ತಿ ಯೋಜನೆಯ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಉಮೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳೇನು?

2020ರಲ್ಲಿ ವೇತನ ಹೆಚ್ಚಳ ಘೋಷಿಸಿದ್ದರೂ 1,750 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. 2024 ರ ಜನವರಿಯಲ್ಲಿ ವೇತನ ಹೆಚ್ಚಳ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದಾಗಿ ನೌಕರರು ಪ್ರತಿಭಟನೆ ಮಾಡಲು ನಿರ್ಧರಿಸಿವೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್ ಅಧ್ಯಕ್ಷ ಎಚ್‌. ವಿ. ಅನಂತ ಸುಬ್ಬರಾವ್ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಪದೇ ಪದೇ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಏನೂ ಮಾಡಿಲ್ಲ. ಇದರಿಂದ ನೌಕರರು ಬೇಸತ್ತಿದ್ದು, ಮುಷ್ಕರ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.

ಜನವರಿ 2020 ಮತ್ತು ಫೆಬ್ರವರಿ 2023 ರವರೆಗೆ ಬಾಕಿ ಉಳಿದಿರುವ ಸರಿಸುಮಾರು 1,785 ಕೋಟಿ ರೂಪಾಯಿಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಪಾವತಿ ಮಾಡದ 2,900 ಕೋಟಿ ರೂಪಾಯಿ ಭವಿಷ್ಯ ನಿಧಿ ಇತ್ಯರ್ಥಗೊಳಿಸಲು ಬೇಡಿಕೆ ಇಡಲಾಗಿದೆ. ನಿವೃತ್ತ ನೌಕರರಿಗೆ 325 ಕೋಟಿ ರೂಪಾಯಿ ತುಟ್ಟಿಭತ್ಯೆ ನೀಡಬೇಕಾಗಿದ್ದು ಅದನ್ನು ಕೂಡಲೇ ಪಾವತಿ ಮಾಡಲು ಆಗ್ರಹಿಸಲಾಗಿದೆ. ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ ಯೋಜನೆಗೆ ಸಂಬಂಧಟ್ಟಂತೆ 2000 ಕೋಟಿ ರೂಪಾಯಿ ಬಾಕಿ ನೀಡಬೇಕಿದ್ದು ಕೂಡಲೇ ಪಾವತಿಸುವಂತೆ ಒತ್ತಾಯಿಸಲಾಗಿದೆ.