ಮುಂಬಯಿ: ಮುಂಬಯಿಯ ನೇವಿ ಚಿಲ್ಡ್ರನ್ಸ್ ಸ್ಕೂಲ್‌ನ 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿ ಕೇಯನ್, ಜಗತ್ತಿನ 7 ಖಂಡಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ.
17 ವರ್ಷ ವಯಸ್ಸಿನ ಕಾಮ್ಯಾ, ತಂದೆ ಎಸ್.ಕಾರ್ತಿಕೇಯನ್‌ರೊಂದಿಗೆ ಡಿ.24 ರಂದು ಅಂಟಾಕ್ಟಿ ಕಾದ ಖಂಡದ ಅತ್ಯುನ್ನತ ಶಿಖರವಾದ ಮೌಂಟ್ ವಿನ್ಸನ್ ಏರುವ ಮೂಲಕ ದಾಖಲೆ ಸ್ಥಾಪಿಸಿದರು.
ಇದಕ್ಕೂ ಮುನ್ನ ಆಫ್ರಿಕಾದ ಕಿಲಿಮಂಜಾರೋ, ಯುರೋಪ್‌ನ ಮೌಂಟ್ ಎಲ್ಬಸ್, ಆಸ್ಟ್ರೇಲಿಯಾದ ಮೌಂಟ್ ಕೋಜಿಯಾಸ್ಕೋ, ದ.ಅಮೆರಿಕದ ಮೌಂಟ್ ಅಕೂಂ ಕಾಗ್ವಾ, ಉ.ಅಮೆರಿಕದ ಮೌಂಟ್ ಡೆನಾಲಿ ಮತ್ತು ತಮ್ಮ 16ನೇ ವಯಸ್ಸಿನಲ್ಲಿ ಏಷ್ಯಾದ ಮೌಂಟ್ ಎವರೆಸ್ಟ್ಗಳನ್ನು ಅವರು ಏರಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕಾಮ್ಯಾ, 7ನೇ ವರ್ಷವಾಗಿದ್ದಾಗ ಮೊದಲ ಬಾರಿ ಉತ್ತರಖಂಡದಲ್ಲಿ ಪರ್ವತಾರೋಹಣ ಮಾಡಿದ್ದೆ ಎಂದಿದ್ದಾರೆ. ಕಾಮ್ಯಾ ಸಾಧನೆಯನ್ನು ಭಾರತೀಯ ನೌಕಾಪಡೆ ಶ್ಲಾಘಿಸಿದೆ.