ಉಡುಪಿ: ಮಾದಕ ವಸ್ತು ಎಂಡಿಎAಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಟಪಾಡಿ ಕೋಟೆ ಗ್ರಾಮದ ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಬಡಾ ಉಚ್ಚಿಲ ನಿವಾಸಿ ಎನ್ ಎಂ ಮಹಮ್ಮದ್ ಮುಕ್ದುಮ್ ಅಲಿ(28) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಡುಪಿ ನಗರ ಠಾಣೆ ಪೊಲೀಸರು, ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್ ಬಳಿ ಕಾರಿನಲ್ಲಿ ನಿಷೇಧಿತ ಎಂಡಿಎAಎ ಪೌಡರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿAದ ಎಂಡಿಎAಎ 69 ಗ್ರಾಂ 127 ಮಿಲಿ ಗ್ರಾಂ , ಮೊಬೈಲ್ ಪೋನ್-6, ನಗದು 1100 ರೂ., ಕಾರು-1, ಲೆನೆವೋ ಲ್ಯಾಪಟಾಪ್-1 ಹಾಗೂ ಇತರೆ ಸೊತ್ತುಗಳು ಸಹಿತ ಅಂದಾಜು 20,11,900 ಮೌಲ್ಯದ ಸೊತ್ತುಗಳನ್ನು ವಶಡಿಸಿಕೊಂಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ