ಬಂಟ್ವಾಳ : 1993 ನ.10 ರಂದು ಪೋಲೀಸ್ ಇಲಾಖೆಗೆ ಮಂಗಳೂರಿನಲ್ಲಿ ಸೇರ್ಪಡೆಗೊಂಡು ಇದೀಗ ಬೆಳ್ಳಿ ಹಬ್ಬ ದ ಸಂಭ್ರಮದ ಆಚರಿಸಿದ ಬಂಟ್ವಾಳ ನಗರ ಠಾಣೆಯ ಆರು ಮಂದಿ ಪೋಲೀಸ್ ಸಿಬ್ಬಂದಿಗಳು.
ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಇವರಿಗೆ ಈಗ ಸಂತಸದ ಸಮಯ. ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರು ಜನರನ್ನು ಠಾಣೆಯಲ್ಲಿ ಅಭಿನಂದಿಸಲಾಯಿತು.
ಒಟ್ಟು 233 ಮಂದಿ ಅ ಸಂದರ್ಭದಲ್ಲಿ ಇಲಾಖೆಗೆ ಸೇರ್ಪಡೆ ಗೊಂಡಿದ್ದರು. ಇವರು ಇಲಾಖೆಗೆ ಸೇರುವ ಸಂದರ್ಭದಲ್ಲಿ ಉಡುಪಿ ಮತ್ತು ದ.ಕ.ಜಿಲ್ಲೆ ಒಂದೇ ಅಗಿತ್ತು. ಬದಲಾದ ಜಿಲ್ಲೆ ಯ ಬಳಿಕ ಎರಡು ಜಿಲ್ಲೆ ಯ ಮತ್ತು ಮಂಗಳೂರು ಕಮೀಶನರ್ ವಿಭಾಗ ಕ್ಕೆ ವಿಂಗಡನೆಯಾಗಿ ಈ ಬ್ಯಾಚ್ ನ ಸಿಬ್ಬಂದಿ ಗಳು ನಿಯೋಜನೆಗೊಂಡಿದ್ದಾರೆ.
ಪ್ರಸ್ತುತ ಬಂಟ್ವಾಳ ನಗರ ಠಾಣೆಯಲ್ಲಿ ಎಚ್.ಸಿ.ಯಾಗಿ ಮುರಿಗೇಶ್, ಗಿರೀಶ್, ವಿಜಯೇಂದ್ರ, ವಿಜಯ, ಉದಯ ಭಟ್ ಮತ್ತು ಜಯಾನಂದ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರನ್ನು ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್ ಐ. ಹರೀಶ್ , ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ವಿಟ್ಲ ಎಸ್.ಐ.ಯಲ್ಲಪ ಹಾಗೂ ಬಂಟ್ವಾಳ ಎ.ಎಸ್.ಪಿ.ಕಚೇರಿ, ಬಂಟ್ವಾಳ ವ್ರತ್ತ ನಿರೀಕ್ಷಕ ಕಚೇರಿ, ಬಂಟ್ವಾಳ ನಗರ, ಗ್ರಾಮಾಂತರ , ಸಂಚಾರಿ ಪೋಲೀಸ್ ಠಾಣೆ, ವಿಟ್ಲ ಠಾಣೆ ಸಿಬ್ಬಂದಿ ಗಳು ಹಾಗೂ ಗ್ರಹ ರಕ್ಷಕದಳ ಸಿಬ್ಬಂದಿ ಗಳು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು.