ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಪುತ್ತೂರು ತಾಲೂಕು,ಕೃಷಿಕ ಸಮಾಜ ನಿರ್ದೇಶಕರ ಚುನಾವಣೆ-ಕಹಳೆ ನ್ಯೂಸ್
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಪುತ್ತೂರು ತಾಲೂಕು, ಇದರ ಕೃಷಿಕ ಸಮಾಜ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧ ಸದಸ್ಯರಾಗಿ ಸಂಜೀವ ಮಠಂದೂರು, ವಿಜಯ್ ಕುಮಾರ್ ರೈ ಕೋರಂಗ, ವಿನೋದ್ ಕುಮಾರ್ ರೈ, ಮೂಲಚಂದ್ರ, ಎಪಿ ಸದಾಶಿವ, ಬಿ ಗೋವಿಂದ ಬೋರ್ಕರ್, ಎಂ ವೈ ರಾಮಪ್ರಸಾದ್, ಬಾಲಕೃಷ್ಣ ಕೆ, ದಯಾನಂದ ಕೆ, ಎಂ ದೇವಣ್ಣರೈ, ಡಿ ವಿಜಯ ಕೃಷ್ಣ ಭಟ್, ಬಿಕೆ ಎಸ್ ಸುಭ್ರಾಯ್ಯ ಶೆಟ್ಟಿ, ಎ ವಿನೋದ್ ಕುಮಾರ್ ಶೆಟ್ಟಿ, ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಪುತ್ತೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ ಕೋರಂಗ,ಉಪಾಧ್ಯಕ್ಷರಾಗಿ ಎ ಪಿ ಸದಾಶಿವ, ಪ್ರಧಾನ ಕಾರ್ಯದರ್ಶಿಯಾಗಿ ಮೂಲಚಂದ್ರ, ಖಜಾಂಜಿಯಾಗಿ ಬಿ ಗೋವಿಂದ ಬೋರ್ಕರ್, ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಮಾಜಿ ಶಾಸಕ ಸಂಜೀವ ಮಾಠಂದೂರು ಅವರು ಪುತ್ತೂರು ತಾಲೂಕಿನಿಂದ ಅವಿರೋಧವಾಗಿ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದಾರೆ.