ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧದದ ಆಹಾರ ಶಾಖೆಯಲ್ಲಿ ಪಡಿತರ ಚೀಟಿ ತಿದ್ದುಪಡಿ ಮತ್ತು ವಿತರಣೆ ವೇಳೆ ಗೊಂದಲ ಉಂಟಾದ ಕಾರಣ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಂಗಳವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಎರಡು ದಿನಗಳಲ್ಲಿ ಪಡಿತರ ಚೀಟಿ ಪಡೆಯುವುದಕ್ಕೆ ನೂರಾರು ಜನ ಸೇರಿದ್ದು, ಇಡೀ ದಿನ ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದ ಫಲಾನುಭವಿಗಳು ಶಾಸಕರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದರು.
ಪಡಿತರ ಚೀಟಿ ತಿದ್ದುಪಡಿ ಮತ್ತು ವಿತರಣೆಗೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ನೂಕು ನುಗ್ಗಲು ಮತ್ತು ಗೊಂದಲ ಉಂಟಾಗಿದ್ದು, ಈ ಬಗ್ಗೆ ತಹಶೀಲ್ದಾರ್ ಮಾಧ್ಯಮಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಪ್ರಮುಖರಾದ ವಿಕಾಸ್ ಪುತ್ತೂರು, ಶಾಂತವೀರ ಪೂಜಾರಿ, ಶಶಿಕಾಂತ್ ಶೆಟ್ಟಿ ಸರಪಾಡಿ, ಅನೂಪ್ ಮಯ್ಯ, ಮೋಹನ್ ಪಿ.ಎಸ್., ಶಿವರಾಜ್ ಕಾಂದಿಲ, ಪ್ರಣಾಮ್ ಅಜ್ಜಿಬೆಟ್ಟು, ಆನಂದ ಶಂಭೂರು ಜತೆಗಿದ್ದರು.