ಯಕ್ಷಗಾನ ಮೇಳದ ಸ್ತ್ರೀ ವೇಷಧಾರಿ, ಯುವ ಕಲಾವಿದ ರಸ್ತೆ ಅಪಘಾತದಲ್ಲಿ ಮೃ*ತ್ಯು-ಕಹಳೆನ್ಯೂಸ್
ಮಂಗಳೂರು: ನಗರದ ಹೊರವಲಯದ ಅರ್ಕುಳದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯಕ್ಷಗಾನದ ಉದಯೋನ್ಮುಖ ಕಲಾವಿದ ಮುಂಡೂರಿನ ಪ್ರವೀತ್ ಆಚಾರ್ಯ (22) ಕೊನೆಯುಸಿರೆಳೆದರು.
ಮುಂಡೂರಿನ ಭಾಸ್ಕರ ಆಚಾರ್ಯ ಮತ್ತು ಭಾರತೀ ಆಚಾರ್ಯ ದಂಪತಿಯ ಪುತ್ರರಾದ ಅವರು ಅವರು ಸಸಿಹಿತ್ಲು ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು.
ಅವರು ಸ್ತ್ರೀವೇಷಗಳಿಗೆ ಅದರಲ್ಲೂ ದೇವಿಯ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿಯಾಗಿದ್ದರು. ಯಕ್ಷಗಾನ ಪ್ರದರ್ಶನಕ್ಕೆ ತೆರಳಲು ಬೈಕಿನಲ್ಲಿ ಸಾಗುತ್ತಿದ್ದಾಗ ಐಸ್ ಕ್ರೀಂ ಸಾಗಿಸುವ ವಾಹನ ಡಿಕ್ಕಿ ಹೊಡೆದಿತ್ತು. ತಲೆಯ ಮೇಲೆ ವಾಹನದ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು ಎಂದು ಮೂಲಗಳು ತಿಳಿಸಿವೆ.