Thursday, January 9, 2025
ಅಂತಾರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಹೆತ್ತ ‘ತಾಯಿ’ಯನ್ನೇ ಮದುವೆಯಾದ 18 ವರ್ಷದ ಮಗ -ಕಹಳೆ ನ್ಯೂಸ್

ಪಾಕಿಸ್ತಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಮದುವೆಯಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ತಾಯಿಯನ್ನ ಮದುವೆಯಾದ ಯುವಕ, ಸಧ್ಯ ಮದುವೆಯ ಸುದ್ದಿಯನ್ನ ಬಹಿರಂಗಪಡಿಸಿದ್ದಾನೆ. ಇನ್ನು ತನ್ನ ಇನ್ಸ್ಟಾ ಪ್ಲಾಟ್ಫಾರ್ಮ್’ನಲ್ಲಿ ಏಕೆ ಮದುವೆಯಾಗಬೇಕಾಯಿತು.? ಅನ್ನೋದನ್ನ ವಿವರಿಸಿದ್ದಾನೆ.

ಹೆತ್ತ ತಾಯಿಯನ್ನ ಮದುವೆಯಾಗಲು ಕಾರಣವೇನು.?
ನೆರೆಯ ಪಾಕಿಸ್ತಾನದ 18 ವರ್ಷದ ಯುವಕ ಅಬ್ದುಲ್ ಅಹ್ಮದ್ ತನ್ನ ಸ್ವಂತ ತಾಯಿಯನ್ನ ಮದುವೆಯಾಗಿದ್ದಾನೆ. ಹೌದು, ಬೆಳೆದ ಮಗ ತನ್ನ ತಾಯಿಯನ್ನ ವರೆಸಿದ್ದು, ಸಧ್ಯ ಜಗತ್ತಿಗೆ ಈ ಸುದ್ದಿಯನ್ನ ಬಹಿರಂಗಪಡಿಸಿದ್ದಾನೆ. ಯುವಕ ತನ್ನ ಮದುವೆಯ ವೀಡಿಯೊವನ್ನ ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊAಡಿದ್ದು, ತಾಯಿಯನ್ನ ಏಕೆ ಮದುವೆಯಾಗಬೇಕಾಯಿತು ಎಂಬುದನ್ನು ವಿವರಿಸಿದ್ದಾನೆ. “ನನ್ನ ತಾಯಿಯನ್ನ ದೈಹಿಕ ಸಂತೋಷಕ್ಕಾಗಿ ಮದುವೆಯಾಗಿಲ್ಲ ಬದಲಾಗಿ ಆಕೆಗೆ ಉತ್ತಮ ಜೀವನವನ್ನ ನೀಡಲು ಮದುವೆಯಾಗಿದ್ದೇನೆ” ಎಂದು ಹೇಳಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ, ಅಬ್ದುಲ್ ತಾಯಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದು, ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಜನಿಸಿದ ಕೆಲವು ದಿನಗಳ ನಂತ್ರ ಆಕೆಯ ಪತಿ ಸಾವನ್ನಪ್ಪಿದ್ದಾನೆ. ಅಂದಿನಿAದ ಆಕೆ ತನ್ನ ಮಕ್ಕಳನ್ನ ಬೆಳೆಸಿದ್ದು, ಎಷ್ಟೇ ಆರ್ಥಿಕ ಸಮಸ್ಯೆಗಳು ಬಂದರೂ ಅವರಿಗಾಗಿ ಶ್ರಮಿಸಿದ್ದಾಳೆ. ತಾಯಿಯ ಪ್ರೀತಿ ತಂದೆಯ ಕೊರತೆ ಅರಿಯದೇ ಬೆಳೆಯುವಂತೆ ಮಾಡಿದೆ. ಇನ್ನು ತಾಯಿಯ ಕಷ್ಟ ವ್ಯರ್ಥ ಮಾಡದ ಮಕ್ಕಳು ಒಳ್ಳೆಯ ಕೆಲಸ ಪಡೆದುಕೊಂಡಿದ್ದಾರೆ. ಅದ್ರಂತೆ, ಮಗ ಜೀವನದಲ್ಲಿ ಸೆಟಲ್ ಆಗಿದ್ದು, ಆತನಿಗೊಂಡು ಮದುವೆ ಮಾಡಿದ್ರೆ ತನ್ನ ಕೆಲಸ ಮುಗಿಯುತ್ತೆ ಎಂದು ಅಬ್ದುಲ್ ನ ತಾಯಿ ಭಾವಿಸಿದ್ದರು. ಆದ್ರೆ, ಅಬ್ದುಲ್ ಅಂದುಕೊAಡಿದ್ದೇ ಬೇರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ತಾಯಿಗೆ ಹೊಸ ಜೀವನ ನೀಡಲು ಅಬ್ದುಲ್ ಆಲೋಚನೆ.!
ಅಬ್ದುಲ್’ಗೆ ತನ್ನ ತಾಯಿಯ ಬಗ್ಗೆ ಯಾರೂ ಮಾಡದ ಅಲೋಚನೆ ಮಾಡಿದ್ದು, ಬಾಲ್ಯದಿಂದಲೂ ಆಕೆ ಅನುಭವಿಸಿದ ಕಷ್ಟವನ್ನ ತಡೆಯಲು ಅಮ್ಮನನ್ನೇ ಎರಡನೇ ಬಾರಿಗೆ ಮದುವೆಯಾಗಲು ಬಯಸಿದ. ಆದರೆ, ಪಾಕಿಸ್ತಾನದಲ್ಲಿ ವಿಚಿತ್ರ ಬದ್ಧತೆಗಳಿದ್ದು, ಒಬ್ಬ ವ್ಯಕ್ತಿ ಎಷ್ಟು ಮದುವೆಗಳನ್ನ ಬೇಕಾದರೂ ಆಗಬಹುದು. ಆದ್ರೆ, ಮಹಿಳೆ ಒಂದು ಬಾರಿ ಮಾತ್ರ ಮದುವೆಯಾಗಬೇಕು. ಯುವಕನ ತಾಯಿ ಎರಡನೇ ಬಾರಿಗೆ ಮದುವೆಯಾಗಲು ಬಯಸಿದ್ದರೂ, ನಿಯಮಗಳು ಒಪ್ಪದ ಕಾರಣ ಆಕೆತುಂಬಾ ಅಸಮಾಧಾನಗೊಂಡಿದ್ದಳು. ಅದೇ ಸಮಯದಲ್ಲಿ, ಬೇರ್ಯಾರೋ ತಮ್ಮ ತಾಯಿಯನ್ನ ಮದುವೆಯಾದರೂ, ಆಕೆಯನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆಯೇ.? ಇಲ್ಲವೇ.? ಅನ್ನೋ ಅನುಮಾನ ಯುವಕನಿಗಿತ್ತಂತೆ. ಹಾಗಾಗಿ ಆತ ತನ್ನ ತಾಯಿಯನ್ನ ಮದುವೆಯಾಗಲು ನಿರ್ಧರಿಸಿದ್ದಾನೆ.

ಆರಂಭದಲ್ಲಿ ಮದುವೆಗೆ ಒಪ್ಪದ ಅಬ್ದುಲ್ ತಾಯಿ.!
ಅಬ್ದುಲ್ ಈ ಹಿಂದೆ ಮದುವೆಯ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದ. ಆದರೆ, ಮೊದಲಿಗೆ, ಆಕೆ ಒಪ್ಪಲಿಲ್ಲ. ಆದರೆ, ಅಬ್ದುಲ್ ತಾಯಿಯನ್ನ ಮನವೊಲಿಸಿದ ನಂತರ ಆಕೆ ಅಂತಿಮವಾಗಿ ಒಪ್ಪಿಕೊಂಡಳು. ನಂತ್ರ ಆತ ಹಿರಿಯರಿಗೆ ವಿಷಯ ತಿಳಿಸಿದ್ದು, ಅವರ ಸಮ್ಮುಖದಲ್ಲಿ ತನ್ನ ತಾಯಿಯನ್ನ ಮದುವೆಯಾದನು.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ನೆಟ್ಟಿಗರು ಮದುವೆಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಬ್ದುಲ್ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕೆಲವರು ಹೇಳಿದರೆ, ಇತರರು ಅವನ ತಾಯಿಯನ್ನ ಮದುವೆಯಾಗುವ ಬಗ್ಗೆ ಕೋಪಗೊಂಡಿದ್ದಾರೆ. ಮಹಿಳೆ ಎರಡನೇ ಬಾರಿಗೆ ಮದುವೆಯಾಗಬಾರದು ಎಂಬ ನಿಯಮವಿದ್ದರೆ. ಅಬ್ದುಲ್ ಅವರ ತಾಯಿ ಎರಡನೇ ಬಾರಿಗೆ ಹೇಗೆ ವಿವಾಹವಾದರು.? ಎಂದು ಪ್ರಶ್ನಿಸಿದ್ದಾರೆ.