Thursday, January 9, 2025
ಬೆಂಗಳೂರುರಾಜ್ಯಸುದ್ದಿ

ಗಾಯಕಿಯೊಂದಿಗೆ ವೈವಾಹಿಕ ಜೀವನಕ್ಕೆ ಸಜ್ಜಾದ ಸಂಸದ ತೇಜಸ್ವಿ ಸೂರ್ಯ- ಕಹಳೆ ನ್ಯೂಸ್

ಬೆಂಗಳೂರು : ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಕರ್ನಾಟಕದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಈಗ ಎಪಿ ಅಂತಲೇ ಜನಪ್ರಿಯರಾಗಿರುವ ತೇಜಸ್ವಿ ಸೂರ್ಯ ಜಂಟಿಯಾಗುವುದಕ್ಕೆ ನಿರ್ಧರಿಸಿದ್ದು, ಚೆನ್ಣೈ ಮೂಲದ ಗಾಯಕಿಯನ್ನು ವಿವಾಹವಾಗುತ್ತಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ತಮ್ಮ ವಿವಾಹದ ಬಗ್ಗೆ ಸುಳಿವನ್ನು ಬಿಟ್ಟಕೊಟ್ಟಿಲ್ಲ. ಆದರೆ, ಪ್ರಧಾನಿ ಮೋದಿ ಮೆಚ್ಚಿ ಗಾಯಕಿಯೊಂದಿಗೆ ತೇಜಸ್ವಿ ಸೂರ್ಯ ವಿವಾಹ ನಿಶ್ವಯವಾಗಿದ್ದು, ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ಕೊಟ್ಟಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತೆರಮರೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿವೆ ಅನ್ನೋ ಮಾತು ಹೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ ತೇಜಸ್ವಿ ಸೂರ್ಯ ಜೊತೆ ಹಸಮಣೆ ಏರುತ್ತಿರುವ ಹುಡುಗಿ ಶಿವಶ್ರೀ ಸ್ಕಂದ ಪ್ರಸಾದ್. ತಮಿಳುನಾಡು ಮೂಲದ ಇವರು ವೃತ್ತಿಯಲ್ಲಿ ಗಾಯಕಿ. ಹಾಗೇ ಭರತನಾಟ್ಯದಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. 2025, ಮಾ. 4 ರಂದು ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು