Sunday, January 19, 2025
ಕ್ರೈಮ್ಬೆಂಗಳೂರುಸುದ್ದಿ

ಪಬ್‌ನಲ್ಲಿ ಡ್ರಿಂಕ್ಸ್ ಮಾಡುವಂತೆ ಒತ್ತಾಯಿಸಿ ಯುವತಿ ಜೊತೆ ಅಸಭ್ಯ ವರ್ತನೆ ; ಕೇಸ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ನ್ಯೂ ಇಯರ್ ಪಾರ್ಟಿ ವೇಳೆ ಯುವತಿ ಜೊತೆ ಅಸಭ್ಯ ವರ್ತನೆ ಮಾಡಿದ ಘಟನೆ ಬೆಳ್ಳಂದೂರಿನ ಪಬ್‌ವೊಂದರಲ್ಲಿ ನಡೆದಿದೆ.

ಒಡಿಶಾ ಮೂಲದ ಯುವತಿ ಬಾಯ್‌ಫ್ರೆಂಡ್ ಜೊತೆ ನ್ಯೂ ಇಯರ್ ಪಾರ್ಟಿಗೆ ತೆರಳಿದ್ದರು. ಈ ವೇಳೆ ಪಾರ್ಟಿ ಮಾಡುತ್ತಿದ್ದಾಗ ಕಿಡಿಗೇಡಿಯೊಬ್ಬ ಮದ್ಯ ಸೇವಿಸುವಂತೆ ಆಫರ್ ಮಾಡಿದ್ದ. ಆದರೆ ಯುವತಿ ಮದ್ಯವನ್ನು ನಿರಾಕರಿಸಿದ್ದಳು. ಆಗ ಎಣ್ಣೆ ಸೇವಿಸಲೇಬೇಕೆಂದು ಒತ್ತಾಯ ಮಾಡಿ ಅಸಭ್ಯ ವರ್ತನೆ ಮಾಡಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಜೆಕ್ಟ್ ಮಾಡಿದಾಗ ಮಾತಿಗೆ ಮಾತು ಬೆಳೆದ ಪರಿಣಾಮ ತಕ್ಷಣ ಪಬ್ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಸಿಬ್ಬಂದಿ ಬರುತ್ತಲೇ ಯುವಕ ಪಬ್‌ನಿಂದ ಎಸ್ಕೇಪ್ ಆಗಿದ್ದ. ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ ಆರೋಪದಡಿ ಯುವತಿ ದೂರು ನೀಡಿದ್ದು, ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು