Tuesday, April 8, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದ ವಿದ್ಯಾರ್ಥಿ-ಕಹಳೆ ನ್ಯೂಸ್

ಬಂಟ್ವಾಳ: ಕಡೇಶ್ವಾಲ್ಯ ಸರಕಾರಿ ಶಾಲೆಯ ವಿದ್ಯಾರ್ಥಿಯೋರ್ವ ತನ್ನಲ್ಲಿರುವ ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದಿದ್ದಾನೆ.

ಕೆದಿಲ ಗ್ರಾಮದ ಗುಡ್ಡಕೋಡಿ ನಿವಾಸಿ ಲಿಂಗಪ್ಪ ನಾಯ್ಕ-ಆಶಾ ದಂಪತಿಯ ಪುತ್ರ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ನಾಯ್ಕ ಈಗ 2 ಕಿ.ಮೀ.ದೂರದ ಶಾಲೆಗೆ ಇದೇ ಸೈಕಲ್‌ನಲ್ಲಿ ಹೋಗುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

9 ಸಾವಿರ ರೂ. ವೆಚ್ಚ
ಮೋಕ್ಷಿತ್‌ಗೆ ಶಾಲೆಗೆ ಹೋಗಲು ಹೆತ್ತವರು ಸೈಕಲ್ ತೆಗೆದುಕೊಟ್ಟಿದ್ದರು. ಅದನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಯುಟ್ಯೂಬ್ ನೋಡಿ ಕಲಿತು, ಬಳಿಕ ಆನ್‌ಲೈನ್ ಮೂಲಕ ಅದಕ್ಕೆ ಬೇಕಾದ ಎಕ್ಸಲೇಟರ್, ಬ್ರೇಕ್, ಬ್ಯಾಟರಿ, ಮೋಟಾರ್, ಪವರ್ ಬ್ಯಾಂಕ್‌ಗಳನ್ನು ಖರೀದಿಸಿದ್ದಾನೆ. ಅನಂತರ ಒಂದಕ್ಕೊAದು ಜೋಡಿಸಿ, ಬ್ಯಾಟರಿ ಶಕ್ತಿಯಿಂದ ಸೈಕಲ್ ಚಲಿಸುವಂತೆ ಮಾಡಿದ್ದಾನೆ. ಇದಕ್ಕೆ ಒಟ್ಟು 9 ಸಾವಿರ ರೂ. ವೆಚ್ಚವಾಗಿದೆ. ಇಷ್ಟು ಮಾಡಲು ಆತ ತೆಗೆದುಕೊಂಡ ಸಮಯ ಕೇವಲ ಎರಡು ದಿನ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ವಾರಗಳಿಂದ ಈ ಸೈಕಲನ್ನು ಬಳಸುತ್ತಿದ್ದರೂ ಈತನಕ ಯಾವುದೇ ತಾಂತ್ರಿಕ ತೊಂದರೆ ಕಂಡುಬAದಿಲ್ಲ. ಈತನ ಸಾಧನೆಗೆ ಹಲವರು ಬೆನ್ನು ತಟ್ಟಿದ್ದಾರೆ. ಒಂದೆರಡು ಗಂಟೆ ಚಾರ್ಜ್ಗೆ ಇಟ್ಟರೆ ಇಡೀ ದಿನ ಓಡಾಡಬಹುದು ಎಂದು ಮೋಕ್ಷಿತ್ ವಿವರಿಸುತ್ತಾನೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಸಕ್ತಿ
ಬಾಲ್ಯದಿಂದಲೇ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮೋಕ್ಷಿತ್‌ಗೆ ವಿಶೇಷ ಆಸಕ್ತಿ. ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತು ಇದ್ದರೂ ಅದು ಹೇಗೆ ಕಾರ್ಯಾಚರಿಸುತ್ತದೆ ಮತ್ತು ಕೆಟ್ಟು ಹೋದರೆ ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ. ತಂದೆಯಲ್ಲಿರುವ ಸ್ಕೂಟರ್, ಆಟೋರಿಕ್ಷಾ, ಪಿಕ್‌ಅಪ್ ವಾಹನಗಳ ಎಲೆಕ್ಟ್ರಿಕ್ – ಎಲೆಕ್ಟ್ರಾನಿಕ್ ವ್ಯವಸ್ಥೆ ಕೆಟ್ಟು ಹೋದರೆ ಅದನ್ನು ಮೋಕ್ಷಿತ್ ದುರಸ್ತಿ ಮಾಡಿಕೊಡುತ್ತಾನೆ. ಇದೆಲ್ಲವನ್ನೂ ಆತ ಸ್ವಯಂ ಕಲಿತುಕೊಂಡಿದ್ದಾನೆ!

ಹೊಸ ವಸ್ತು ಕಂಡರೆ ಅಧ್ಯಯನ
ಯಾವುದೇ ಹೊಸ ವಸ್ತು ಕಂಡರೂ ಅದನ್ನು ಅಧ್ಯಯನ ಮಾಡುತ್ತಾನೆ. ನಾವೇ ವಿದ್ಯುತ್ ಉಪಕರಣ ಮುಟ್ಟಬೇಡ ಅನ್ನುತ್ತಿದ್ದೆವು. ನನ್ನ ವಾಹನಗಳ ಯಾವುದೇ ಎಲೆಕ್ಟ್ರಿಕ್ ವಸ್ತು ಕೆಟ್ಟು ಹೋದರೂ ಆತನೇ ದುರಸ್ತಿ ಮಾಡುತ್ತಾನೆ. ಈಗ ಸ್ವಂತ ಆಸಕ್ತಿ, ಜ್ಞಾನದಿಂದ ಎಲೆಕ್ಟ್ರಿಕ್ ಸೈಕಲ್ ಸಿದ್ಧಪಡಿಸಿದ್ದಾನೆ.
-ಲಿಂಗಪ್ಪ ನಾಯ್ಕ ಗುಡ್ಡಕೋಡಿ, ಮೋಕ್ಷಿತ್‌ನ ತಂದೆ

ಸ್ಪರ್ಧೆಗೆ ಅಣಿಗೊಳಿಸುತ್ತೇವೆ
ನಮ್ಮ ವಿದ್ಯಾರ್ಥಿ ಮೋಕ್ಷಿತ್‌ನ ಸಾಧನೆ ಕುರಿತು ನಮಗೆ ಹೆಮ್ಮೆ ಇದೆ. ಆತನಿಗೆ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಇರುವ ಆಸಕ್ತಿ ನಮಗೆ ತಡವಾಗಿ ತಿಳಿದುಬಂದಿದೆ. ಮುಂದೆ ಆತನಿಗೆ ವಿಶೇಷ ಪ್ರೋತ್ಸಾಹ ನೀಡಿ ವಿಜ್ಞಾನ ವಿಭಾಗದಲ್ಲಿ ಗುಂಪು ಅಥವಾ ವೈಯಕ್ತಿಕ ವಿಭಾಗದಲ್ಲಿ ಯಾವುದಾದರೊಂದು ಮಾದರಿಯನ್ನು ಸಿದ್ಧಪಡಿಸಿ ಸ್ಪರ್ಧೆಗೆ ಅಣಿಗೊಳಿಸುವ ಕಾರ್ಯ ಮಾಡುತ್ತೇವೆ.
-ಗೀತಾಕುಮಾರಿ, ಗಣಿತ ಶಿಕ್ಷಕಿ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆ ,ಕಿರಣ್ ಸರಪಾಡಿ

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ