
ಕಲ್ಕೂರ ಪ್ರತಿಷ್ಠಾನದಿಂದ ಮುದ್ರಿಸಲ್ಪಟ್ಟ 2025 ರ ದಿನಚರಿ ಕ್ಯಾಲೆಂಡರನ್ನು ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.
ಭಾರತೀಯ ಶಾಸ್ತ್ರಸಿದ್ಧ ರಾಷ್ಟ್ರೀಯ ಪಂಚಾಂಗ ಆಧಾರಿತ ಎಲ್ಲಾ ಮಾಹಿತಿಗಳ ಸಹಿತವಾಗಿ ರಾಷ್ಟ್ರೀಯ ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಾದೇಶಿಕವಾದ ಧಾರ್ಮಿಕ ಕ್ಷೇತ್ರಗಳ ಉತ್ಸವಾದಿ ವಿವರಗಳನ್ನೊಳಗೊಂಡಿರುವ ಈ ಕ್ಯಾಲೆಂಡರ್ ಸರ್ವರಿಗೂ ಬಹುಪಯೋಗಿಯಾಗಿದೆ ಎಂದು ಪೂಜ್ಯಶ್ರೀಗಳು ಶ್ಲಾಘಿಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಮಠದ ದೀವಾನರಾದ ನಾಗರಾಜ ಆಚಾರ್ಯ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ರತೀಶ್ ಆಚಾರ್ಯ ಹಾಗೂ ಕಲ್ಕೂರ ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಹಂದೆ ಈ ಸಂದರ್ಭ ಉಪಸ್ಥಿತರಿದ್ದರು.