Sunday, January 19, 2025
ಕೇರಳಸಂತಾಪಸುದ್ದಿ

ಕೇರಳ: ಬ್ರೇಕ್ ಫೇಲ್ ಆಗಿ ಉರುಳಿದ ಬಿದ್ದ ಶಾಲಾ ಬಸ್-ಕಹಳೆ ನ್ಯೂಸ್

ಕೇರಳ: ಸ್ಕೂಲ್ ಬಸ್ ಉರುಳಿ ಬಿದ್ದು ಒಂದು ಮಗು ಸಾವನ್ನಪ್ಪಿ ಹತ್ತಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ. ಈ ಘಟನೆ ಕೇರಳದ ತಳಿಪರಂಬದ ಚೆಂಗಲಾಯಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ತಳಪರಂಬದಿAದ ಇರಿಟ್ಟಿ ಕಡೆಗೆ ಸಂಚರಿಸುತ್ತಿದ್ದ ಸ್ಕೂಲ್ ಬಸ್ ಬ್ರೇಕ್ ಫೇಲ್ ಆಗಿ ಉರುಳಿದ ಬಿದ್ದು ಈ ಅಪಘಾತ ಸಂಭವಿಸಿದೆ.

ಚೆAಗಲಾಯಿ ಪಂಚಾಯತ್‌ನ ವಳಕ್ಕೈ ಎಂಬಲ್ಲಿ ನಡೆದ ಈ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಮೃ*ತ ಪಟ್ಟಿದ್ದಾನೆ . ಕುರುಮತ್ತೂರು ಪಂಚಾಯತ್ ವ್ಯಾಪ್ತಿಯ ಚಿನ್ಮಯ ವಿದ್ಯಾಲಯಕ್ಕೆ ಸೇರಿದ ಶಾಲಾ ಬಸ್ ಇಳಿಜಾರಿನಲ್ಲಿ ಬಂದು ಹೆದ್ದಾರಿ ಪ್ರವೇಶಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎರಡು ಮೂರು ಪಲ್ಟಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಸ್ಥಳಕ್ಕೆ ಧಾವಿಸಿದ ನಿವಾಸಿಗಳು ವಿದ್ಯಾರ್ಥಿಗಳನ್ನು ತಳಿಪರಂಬ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು