ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಟಿ.ಬಿ ಜಯಚಂದ್ರ ವಾಗ್ಧಾಳಿ ನಡೆಸಿ ಪ್ರಧಾನಿ ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಅಂತ ತುಮಕೂರಿನಲ್ಲಿ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡಿದರು.
ಈ ಹಿನ್ನೆಲೆಯಲ್ಲಿ ಕೊಲೆ ಅಪರಾಧ ಸಂಚು ರೂಪಿಸಿದ ಟಿಬಿ ಜಯಚಂದ್ರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಸುಧೀರ್ ಶೆಟ್ಟಿ ಎಂಬವರು ಊರ್ವ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಪೊಲೀಸರು ಸದ್ರಿ ದೂರಿನನ್ವಯ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.