ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ನಡೆದ ಗೊನೆ ಮುಹೂರ್ತ- ಕಹಳೆ ನ್ಯೂಸ್
ಪುತ್ತೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಗೊನೆ ಮುಹೂರ್ತ ಜ.2ರಂದು ನಡೆಯಿತು.
ಶ್ರೀ ದೇವರಿಗೆ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು, ಬಳಿಕ ಬ್ಯಾಂಡ್ ವಾದ್ಯ ಘೋಷದೊಂದಿಗೆ ಕೃಷ್ಣ ರೈ ಕುದ್ದಾಡಿಯವರ ತೋಟಕ್ಕೆ ತೆರಳಿ ಗೊನೆ ಮುಹೂರ್ತ ನಡೆಸಲಾಯಿತು. ಕ್ಷೇತ್ರದ ಸೇನವರಾದ ಉದಯ ಕುಮಾರ್ ಪಡುಮಲೆ ಗೊನೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಸದಸ್ಯರುಗಳಾದ ನಾರಾಯಣ ಭಟ್ ಬೀರ್ನೋಡಿ, ಚಂದ್ರಶೇಖರ ಆಳ್ವ ಪಡುಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ , ಕೋಶಾಧಿಕಾರಿ ರಾಜೇಶ್ ಮೇಗಿನಮನೆ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, .ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ರವಿರಾಜ ರೈ ಸಜಂಕಾಡಿ, ಸಮಿತಿ ಸದಸ್ಯರುಗಳಾದ ವಿಶ್ವೇಶ್ವರ ಭಟ್ ಪಾದೆಕರ್ಯ, ಪುರಂದರ ರೈ ಕುದ್ದಾಡಿ, ಶ್ರೀನಿವಾಸ್ ಗೌಡ ಕನ್ನಯ, ಸುರೇಶ್ ರೈ ಪಳ್ಳತ್ತಾರು, ಪದ್ಮನಾಭ ರೈ ಅರೆಪ್ಪಾಡಿ, ಗಿರೀಶ್ ಗೌಡ ಕನ್ನಯ,ಶಿವರಾಮ ರೈ ಮೈಂದನಡ್ಕ, ರತ್ನಾಕರ ರೈ ಕುದ್ಕಾಡಿ, ಸತೀಶ್ ಗೌಡ, ಪುರಂದರ ರೈ ಸೆನೇರಮಜಲು, ಪುಷ್ಪರಾಜ ಆಳ್ವ ಗಿರಿಮನೆ ಮಹಾಲಿಂಗ ಪಾಟಾಳಿ ಕುದ್ಕಾಡಿ, ನಾರಾಯಣ ನಾಯ್ಕ ನೇರ್ಲಪ್ಪಾಡಿ, ಅನಂದ ಪಾಟಾಳಿ ಏರಾಜೆ ಶಿವಕುಮಾರ್ ಮೋಡಿಕೆ, ಸುಧಾಕರ ರೈ ಈಶಮೂಲೆ, ನಾರಾಯ ಪಾಟಾಳಿ ಪಟ್ಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.