Monday, January 6, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿಯಿಂದ ಹಲ್ಲೆ ಗೈದ ಆರೋಪಿಯನ್ನು ಬಂಧಿಸಿದ ಪೊಲೀಸರು-ಕಹಳೆ ನ್ಯೂಸ್

ಮಂಗಳೂರು: ನಗರದ ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 17,500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೊAದೇಲ್ ಚರ್ಚ್ ಹಿಂಭಾಗದ ಪಟ್ರಕೋಡಿಯ ಸಿರಿಲ್ ಕಂಪೌAಡ್ ನಿವಾಸಿ ಸುನೀಲ್ (31 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಆರೋಪಿಯು 2024ರ ಡಿ 28ರಂದು ಮಧ್ಯಾಹ್ನ ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಡ್ರಾಯರ್‌ನಲ್ಲಿದ್ದ ?19,300 ನಗದನ್ನು ಸುಲಿಗೆ ಮಾಡಿದ್ದ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಯು ಸುಲಿಗೆ ಮಾಡಿದ್ದ ?17,500 ನಗದು ಸೇರಿದಂತೆ ಒಟ್ಟು ? 1.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಆತನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಗಳಾದ ವಿನಾಯಕ ಭಾವಿಕಟ್ಟಿ ಹಾಗೂ ಶಿವಕುಮಾರ್ ಮತ್ತು ಸಿಬ್ಬಂದಿ ಜಯಾನಂದ, ಸಂದೀಪ್, ರಾಜೇಸಾಬ್, ಗಂಗಾಧರ್, ರಾಘವೇಂದ್ರ, ಪ್ರದೀಪ್ ಮತ್ತಿತರರು ಭಾಗವಹಿಸಿದ್ದಾರೆ ಎಂದರು.