Sunday, January 19, 2025
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ:ನಡುಗಲ್ಲು ಸಮೀಪ ಹಗಲಿನಲ್ಲೇ ಕಾಣಿಸಿಕೊಂಡ ಕಾಡಾನೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಪ್ರದೇಶದಲ್ಲಿ ಹಗಲಿನಲ್ಲೇ ಕಾಡಾನೆ ಸಂಚರಿಸಿದೆ.

ಕಲ್ಲಾಜೆ ಭಾಗದಿಂದ ಅಲ್ಲಿನ ಹೊಳೆಗೆ ಇಳಿದ ಕಾಡಾನೆ ಮರಕತ ದೇವಸ್ಥಾನದ ಮುಂಭಾಗದ ರಸ್ತೆಯ ಮೂಲಕ ಯೇನೆಕಲ್ಲು ಗ್ರಾಮದ ಅರಂಪಾಡಿ ಭಾಗದಲ್ಲಿ ಸಂಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ರಾತ್ರಿ ವೇಳೆ ಯೇನೆಕಲ್ಲು ಶಾಲಾ ಮೈದಾನದಲ್ಲಿ ಸಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಕಾಡಾನೆ ಅರಣ್ಯದತ್ತ ತೆರಳಿದೆ. ಕಾಡಾನೆ ಯಾವುದೇ ಹಾನಿ ಮಾಡಿಲ್ಲ. ಹೊಳೆಯಿಂದ ಮೇಲೆ ರಸ್ತೆಗೆ ಬಂದು ರಸ್ತೆಯಲ್ಲೇ ಸಂಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು