ಸುರತ್ಕಲ್: ಚಿತ್ರಾಪುರ ಕುಳಾಯಿ ಸಮುದ್ರ ತೀರದಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನ ಶವ ಶುಕ್ರವಾರ ಸಂಜೆ ಪತ್ತೆಯಾಗಿದೆ.
ಮಹಮ್ಮದ್ ಖುರೇಶಿ (35) ಮೃತರು. ಮೈಮೇಲೆ ಬಟ್ಟೆ, ಹಾಕಿದ ಶೂ ಕೆಲವು ದಾಖಲೆ ದೊರಕಿದ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ. ಸಮುದ್ರದಲ್ಲಿ ಈಜುವಾಗ ಇಲ್ಲವೆ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.