ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ-ಕಹಳೆ ನ್ಯೂಸ್
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಜ.4ರ ಶನಿವಾರ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಮಾತನಾಡಿ, ತುಳುನಾಡಿನ ಕೃಷಿಕರ ಜಾನಪದ ಕ್ರೀಡೆಯಾಗಿರುವ ಕಂಬಳ ನಿರಂತರವಾಗಿ ನಡೆಯುವಂತಾಗಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಜೈನ್, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ರಾಜ್ಯ ಭಾಲ ಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಭಟ್ ಜಿ.ಕೆ. ಅವರು ಶುಭ ಹಾರೈಸಿದರು.
ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನ ಕುಮಾರ ಚೌಟ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಮೂಡುಬಿದಿರೆ ಉದ್ಯಮಿ ಹರ್ಷವರ್ಧನ ಪಡಿವಾಳ್, ಹೊಸಂಗಡಿ ಗ್ರಾ.ಪಂ.ಪಿಡಿಒ ಗಣೇಶ್ ಶೆಟ್ಟಿ, ಪ್ರಮುಖರಾದ ವಸಂತ ಶೆಟ್ಟಿ ಕುಕ್ಕೇಡಿಗುತ್ತು, ಸಿದ್ದಕಟ್ಟೆ ಅಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಮುಸ್ತಾಫಾ, ಪೂನಾ ಉದ್ಯಮಿ ಪ್ರಭಾಕರ ಶೆಟ್ಟಿ ಮೀಯಾರು, ಸ್ಥಳದಾನಿಗಳಾದ ಸುಧೀರ್ ಶೆಟ್ಟಿ, ರಾಜು ಶೆಟ್ಟಿ, ಮಹಾಬಲ ಶೆಟ್ಟಿ, ಮಹಾವೀರ ಚೌಟ, ಪ್ರವೀಣ್ ಕುಲಾಲ್, ಹರೀಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಸುಂದರ ಪೂಜಾರಿ, ಬಾಬು ಶೆಟ್ಟಿ, ಕರಿಯ ಪೂಜಾರಿ, ಸುಧಾಕರ ಚೌಟ ಬಾವ, ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಸಮಿತಿ ಉಪಾಧ್ಯಕ್ಷ ಕರಿಯಣ್ಣ ಶೆಟ್ಟಿ ಹಕ್ಕೇರಿ, ಪದಾಧಿಕಾರಿಗಳಾದ ಪ್ರಭಾಕರ ಹುಲಿಮೇರು, ರಾಜೇಶ್ ಜಿ.ಶೆಟ್ಟಿ, ಪುಷ್ಪರಾಜ್ ಜೈನ್, ಸಂತೋಷ್ ಶೆಟ್ಟಿ ಕೊನೆರೊಟ್ಟುಗುತ್ತು, ಸತೀಶ್ ಮಠ, ಚಂದ್ರಶೇಖರ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.