Sunday, January 19, 2025
ಬೆಂಗಳೂರುಮಂಗಳೂರುರಾಜ್ಯಸುದ್ದಿ

ಬೆಂಗಳೂರು-ಮಂಗಳೂರು ಪ್ರತಿ ತಿಂಗಳ ಭಾನುವಾರದಂದು ಖ್ಯಾತ ವಾಗ್ಮಿಗಳಿಂದ ತತ್ವಾಧಾರ ಪ್ರವಚನಮಾಲಿಕೆ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಂಗಳೂರು: ಸದ್ವಿಚಾರಗಳ ಸುಪ್ರಸಾರ ಸಾರ್ವಕಾಲಿಕ ಸತ್ಕಾರ್ಯ, ಅವುಗಳ ಪಾಲನೆ, ಪ್ರಸರಣಗಳಿಂದಲೇ ಸಂಸ್ಕೃತಿಯ ಸೌರಭ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧ ಕೇಂದ್ರವು ಪ್ರವಚನಗಳ ಮೂಲಕ ಸದ್ವಿಚಾರಗಳನ್ನು ಸಮಾಜಕ್ಕೆ ನೀಡಲಿದ್ದು, ನಾಡಿನ ವಿದ್ವನ್ಮಣಿಗಳಿಂದ ವಿವಿಧ ವಿಚಾರಗಳ ಕುರಿತು ಪ್ರವಚನಗಳು ನಡೆಯಲಿವೆ.
ವಾಗ್ನಿಗಳಾದ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ವಾನ್ ಉಮಾಕಾಂತ ಭಟ್ಟ, ಡಾ. ಕೆ.ಎಸ್. ಕಣ್ಣನ್, ಡಾ. ಪಾದೇಕಲ್ಲು ವಿಷ್ಣು ಭಟ್ಟ, ಡಾ. ವಿನಾಯಕ ಭಟ್ಟ ಗಾಳಿಮನೆ, ವಿದ್ವಾನ್ ಕೇಶವಭಟ್ ಕೇಕಣಾಜೆ, ರೋಹಿತ್ ಚಕ್ರತೀರ್ಥ ಅವರು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಾಶ್ರಮ ಹಾಗೂ ಮೂರನೇ ಭಾನುವಾರ ಮಂಗಳೂರಿನ ಶ್ರೀ ಭಾರತೀ ವಿದ್ಯಾಲಯ ನಂತೂರಿನಲ್ಲಿ ತತ್ವಾಧಾರ ಪ್ರವಚನ ಮಾಲಿಕೆಯ ಒಂದೊಂದು ಪ್ರವಚನ ನಡೆಸಿಕೊಡಲಿದ್ದಾರೆ.

ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಜನವರಿ 5ರ ಭಾನುವಾರ ಸಂಜೆ 5.30ಕ್ಕೆ ಕಾರ್ಯಕ್ರಮ ಚಾಲನೆಗೊಳ್ಳಲಿದ್ದು ವಿದ್ವಾಂಸರಾದ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿಗಳು ಶಂಕರ ಭಗತ್ಪಾದರು ವಿಷಯದ ಕುರಿತಾಗಿ ಪ್ರವಚನ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು