
ಮಂಗಳೂರು: ನಗರದ ಲೇಡಿಹಿಲ್‌ನಲ್ಲಿ ಸ್ವಿಫ್ಟ್ ಡಿಸೈರ್ (ಸಿಎನ್‌ಜಿ) ಕಾರಿಗೆ ಶನಿವಾರ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಮಣ್ಣಗುಡ್ಡೆಯಿAದ ಲೇಡಿಹಿಲ್ ಕಡೆಗೆ ಬರುತ್ತಿದ್ದ ಕಾರಿನ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು.
ತಕ್ಷಣವೇ ಚಾಲಕ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಕಾರಿನಲ್ಲಿದ್ದವರು ಕೆಳಕ್ಕಿಳಿದಿದ್ದರು. ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾರನ್ನು ಆವರಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಕಾರಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ್ದೇವೆ. ಅಷ್ಟರಲ್ಲೇ ಕಾರಿನ ಶೇ 90ರಷ್ಟು ಸುಟ್ಟು ಹೋಗಿತ್ತು. ಕೊಂಚಾಡಿ ದೇರೇಬೈಲ್‌ನ ಲಿಂಗರಾಜು ಅವರಿಗೆ ಸೇರಿದ ಕಾರು ಇದಾಗಿದೆ. ಎಂಟು ತಿಂಗಳ ಹಿಂದಷ್ಟೇ ಅವರು ಕಾರನ್ನು ಖರೀದಿಸಿದ್ದರು. ಅದನ್ನು ಬಾಡಿಗೆ ವಾಹನವಾಗಿ ಬಳಸುತ್ತಿದ್ದರು. ಪಾಲಿಕೆ ಜೊತೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದರು’ ಎಂದು ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಿಳಿಸಿದರು.