ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಗೃಹೋದ್ಯಮ ಯಂತ್ರ ಹಸ್ತಾಂತರ – ಕಹಳೆ ನ್ಯೂಸ್
ಪುತ್ತೂರು : ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಕಲ್ಲರ್ಪೆ ನಿವಾಸಿ ಶ್ರೀಯುತ ರಾಮಪ್ರಸಾದ ಜಿ ಕೆ ಇವರಿಗೆ ಸುಮಾರು 1 ಲಕ್ಷ ಮೊತ್ತದ ದೀಪದ ಬತ್ತಿ ತಯಾರಿಸುವ ಸ್ವಯಂ ಚಾಲಿತ ಯಂತ್ರವನ್ನು ಉಚಿತವಾಗಿ ಹಸ್ತಾಂತರಿಸಲಾಯಿತು.
ಶ್ರೀಯುತ ರಾಮಪ್ರಸಾದ ಜಿ ಕೆ ಇವರ ಅನಿರೀಕ್ಷಿತ ಅನಾರೋಗ್ಯದ ಕಾರಣದಿಂದಾಗಿ ದೈನಂದಿನ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ ಎದುರಾಗಿದ್ದರೂ, ಸ್ವಾವಲಂಬಿ ಜೀವನ ನಡೆಸಬೇಕೆಂಬ ಇವರ ಮಹದಾಸೆಗೆ ಆಸರೆಯಾಗಿ, ಅವರ ಕುಟುಂಬಕ್ಕೆ ಸೂಕ್ತ ತರನಾದ ಹಾಗೂ ಉಪಯುಕ್ತ ಗೃಹ ಕೈಗಾರಿಕಾ ಉದ್ಯಮವೆಂದು ಮನಗಂಡು ದೀಪದ ಬತ್ತಿ ತಯಾರಿಕಾ ಯಂತ್ರವನ್ನು ಉಚಿತವಾಗಿ ಹಸ್ತಾಂತರಿಸಲು ನಿರ್ಧರಿಸಲಾಯಿತು. ಸ್ವಯಂ ಚಾಲಿತ ಯಂತ್ರವನ್ನು ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸುವ ಕುಟುಂಬಕ್ಕೆ ಆಸರೆಯಾದಂತಹ ದ್ವಾರಕಾ ಪ್ರತಿಷ್ಠಾನದ (ರಿ) ಪುತ್ತೂರು ಇದರ ಸ್ಥಾಪಕರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಹಾಗೂ ಭಟ್ ಬಯೋಟೆಕ್ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಶ್ಯಾಮ್ ಭಟ್ ಇವರು ಶ್ರೀ ರಾಮ ಪ್ರಸಾದ್ ಇವರ ಮುಂದಿನ ಸ್ವಾವಲಂಬಿ ಜೀವನಕ್ಕೆ ಹಾಗೂ ಅತೀ ಶೀಘ್ರದಲ್ಲಿ ಗುಣಮುಖರಾಗುವಂತೆ ಶುಭಹಾರೈಸಿದರು. ದ್ವಾರಕಾ ಪ್ರತಿಷ್ಠಾನ ದ ಉಪಾದ್ಯಕ್ಷರಾದ ಶ್ರೀಮತಿ ಅಶ್ವಿನಿ ಎನ್, ಕಾರ್ಯದರ್ಶಿಗಳಾದ ಶ್ರೀಯುತ ಅಮೃತಕೃಷ್ಣ, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಭಟ್ ಬಯೋಟೆಕ್ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಪವನ್ ಹಾಗೂ ಬಂಧುಮಿತ್ರರು ಈ ಧನ್ಯತಾ ಸಂದರ್ಭಕ್ಕೆ ಸಾಕ್ಷಿಯಾದರು.