ಜ.07ರಿಂದ ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಗ್ರಾಮ ದೈವ ಶ್ರೀ ಶಿರಾಡಿ, ಪಂಜುರ್ಲಿ ಮತ್ತು ಮೊಗೇರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ – ಕಹಳೆ ನ್ಯೂಸ್
![](https://www.kahalenews.com/wp-content/uploads/2025/01/1-1-750x450.jpg)
ಕಡಬ : ಕಡಬ ತಾಲೂಕಿನ ಕ್ಯೂಲ ಗ್ರಾಮದ ಬರಮೇಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಜ.07ರಿಂದ ಗ್ರಾಮ ದೈವ ಶ್ರೀ ಶಿರಾಡಿ, ಪಂಜುರ್ಲಿ ಮತ್ತು ಮೊಗೇರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ನಡೆಯಲಿದೆ.
ಜ07ರಂದು ಪೂರ್ವಾಹ್ನ ಗಂಟೆ 10.00ಕ್ಕೆ ಹೊರೆಕಾಣಿಕೆ, ಸಂಜೆ ಗಂಟೆ 6.30ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ಮಹಾಸುದರ್ಶನ ಹೋಮ, ಪ್ರೇತಾವಾಹನೆ, ಭಾವಾಕರ್ಷಣೆ, ಉಚ್ಚಾಟನೆ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರ ದಿಕ್ಕಲಿ, ಪ್ರಸಾದ ವಿತರಣೆ ನಡೆಯಲಿದೆ.
ಜ.08ರಂದು ಬೆಳಗ್ಗೆ ಗಂಟೆ 700ರಿಂದ ಮಹಾಗಣಪತಿ ಹೋಮ, ಪಂಚವಿAಶತಿ ಕಲಶ ಪೂಜೆ, ದಿವಾಗಂಟೆ 9.16ರ ಕುಂಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗ್ರಾಮದ ರಾಜನ್ ದೈವ ಶ್ರೀ ಶಿರಾಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮ ಹಾಗೂ ದೈವಗಳ ನೇಮೋತ್ಸವ ನೆರವೇರಲಿದೆ. ಪಂಚವಿAಶತಿ ಸಾನ್ನಿಧ್ಯ, ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರು ಬ್ರಾಹ್ಮಣ ಆರಾಧನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಗಂಟೆ 6.30ರಿಂದ ಶ್ರೀ ಶಿರಾಡಿ, ಪಂಜುರ್ಲಿ ಹಾಗೂ ಮೊಗೇರ ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7.30ರಿಂದ ಪಂಜುರ್ಲಿ ಮತ್ತು ಮೊಗೇರ ದೈವಗಳ ನೇಮೋತ್ಸವ ರಾತ್ರಿ ಗಂಟೆ 9.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಜ.09ರಂದು ಬೆಳಗ್ಗೆ ಗಂಟೆ 7.00ರಿಂದ ಶ್ರೀ ಶಿರಾಡಿ ದೈವದ ನೇಮೋತ್ಸವ, ಪೂರ್ವಾಹ್ನ ಗಂಟೆ 11.00ರಿಂದ ಬಟ್ಟಲು ಕಾಣಿಕೆ, ಮಧ್ಯಾಹ್ನ 12.00ರಿಂದ ಅನ್ನಸಂತರ್ಪಣೆ ಬಳಿಕ 12.30ರಿಂದ ಬಿಂದಾರ್ಪಣೆ, ಸಂಜೆ 6.30ರಿಂದ ಶ್ರೀ ಗುಳಿಗ ದೈವದ ನುಡಿಕಟ್ಟು ಆಗಿ ವಳಕಡಮದ ಕುಮಾರಧಾರಾ ನದಿ ತಟದವರೆಗೆ ಊರ ಮಾರಿ ಅಟ್ಟಲಾಗುವುದು. ಜ.10ರಂದು ಬೆಳಗ್ಗೆ ಗಂಟೆ 8.30ರಿಂದ ಶುದ್ಧ ತಂಬಿಲ ನಡೆಯಲಿದೆ.