Tuesday, February 11, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕೆಂಬಣ್ಣದ ಟೇಪ್ ಸುತ್ತಿದ್ದ ಕಟ್ಟುಗಳನ್ನು ಕಾರಾಗೃಹದ ಆವರಣದೊಳಗೆ ಎಸೆಯಲು ಯತ್ನ:ಆರೋಪಿ ಬಂಧನ-ಕಹಳೆ ನ್ಯೂಸ್

ಮಂಗಳೂರು: ಜಿಲ್ಲಾ ಕಾರಾಗೃಹದ ಆವರಣದೊಳಗೆ ಕೆಂಬಣ್ಣದ ಟೇಪ್ ಸುತ್ತಿದ್ದ ಕಟ್ಟುಗಳನ್ನು ಎಸೆಯಲು ಯತ್ನಿಸಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಪAಜಿಮೊಗರುವಿನ ಪ್ರಜ್ವಲ್ (21) ಬಂಧಿತ ಆರೋಪಿ. ಕಾರಾಗೃಹದ ಪಕ್ಕದ ಕೆನರಾ ಕಾಲೇಜಿನ ಮುಖ್ಯದ್ವಾರದ ಮೂಲಕ ಪ್ರವೇಶಿಸಿದ್ದ ಆರೋಪಿ ಕೆಂಬಣ್ಣದ ಟೇಪ್ ಸುತ್ತಿದ್ದ ಕಟ್ಟುಗಳನ್ನು ಕಾರಾಗೃಹದ ಆವರಣ ಗೋಡೆಯ ಒಳಗೆ ಎಸೆಯಲು ಯತ್ನಿಸಿದ್ದ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಅವಿನಾಶ್ ಇದನ್ನು ಗಮನಿಸಿದ್ದು, ಆತನನ್ನು ಹಿಡಿಯಲು ಯತ್ನಿಸಿದ್ದರು. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಕಟ್ಟಿನ ಒಳಗೆ ಎರಡು ಕೀ ಪ್ಯಾಡ್ ಮೊಬೈಲ್ ಫೋನುಗಳು ಹಾಗೂ ಸಿಗರೇಟುಗಳಿದ್ದ ಎರಡು ಪೊಟ್ಟಣಗಳು ಇದ್ದವು. ಪ್ರಜ್ವಲ್ ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದು, ಕೆಲಕಾಲ ಜೈಲಿನಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು