ಕೌಶಿಲ್ ಆರ್ ಸುವರ್ಣ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್
![](https://www.kahalenews.com/wp-content/uploads/2025/01/WhatsApp-Image-2025-01-07-at-2.15.23-PM-750x450.jpeg)
ವಿಟ್ಲ: ಬೈಂದೂರಿನಲ್ಲಿ ನಡೆದ ‘ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್- 2025’ ಸ್ವರ್ಧೆಯಲ್ಲಿ ಕೇಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೌಶಿಲ್ ಆರ್ ಸುವರ್ಣ ಇವರು ಕುಮಿಟೇ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗು ಕಟಾ ವಿಭಾದಲ್ಲಿ ತೃತೀಯ ಸ್ಥಾನ ಪಡೆದಿರತ್ತಾರೆ.
ಕೌಶಿಲ್ ಆರ್ ಸುವರ್ಣ ಇವರು ಕೇಪು ಕುಕ್ಕೆಬೆಟ್ಟು ನಿವಾಸಿ ರೋಹಿತಾಕ್ಷ ಹಾಗೂ ದೀಪಾ (ಸುಮನ) ದಂಪತಿಗಳ ಪುತ್ರನಾಗಿದ್ದಾರೆ.
ಇವರಿಗೆ ವಿಟ್ಲದ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಇವರು ತರಬೇತಿ ನೀಡಿದ್ದಾರೆ. ಮತ್ತು ಇವರ ಸಹಶಿಕ್ಷಕರಾದ ದಿಲಿಪ್, ಸುರೇಶ್,ರೋಹಿತ್ ಎಸ್ ಎನ್, ನಿಖಿಲ್ ಕೆ.ಟಿ, ಪಾವನ್,ಭವಿಶ್,ಸುದೀನ್ ಆಚಾರ್ಯ ಇವರು ಕೂಡ ತರಬೇತಿ ನೀಡಿ ಸಹಕರಿಸಿದ್ದಾರೆ.