ಹೊಸ ಮನೆ ಕ್ರಿಕೆಟರ್ಸ್ (ರೀ )ಪುತ್ತೂರು ಪ್ರಸ್ತುತಪಡಿಸುವ ಅರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ-ಕಹಳೆ ನ್ಯೂಸ್
![](https://www.kahalenews.com/wp-content/uploads/2025/01/WhatsApp-Image-2025-01-07-at-2.26.21-PM-750x450.jpeg)
ಪುತ್ತೂರು :ಹೊಸ ಮನೆ ಕ್ರಿಕೆಟರ್ಸ್ (ರೀ )ಪುತ್ತೂರು ಪ್ರಸ್ತುತಪಡಿಸುವ ಅರ್ಯಾಪು ಪ್ರೀಮಿಯರ್ ಲೀಗ್ 2025 ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಎಪಿಎಲ್ ಪ್ಲೇಯರ್ ಆಕ್ಷನ್ 2025 ಜನವರಿ 5ನೇ ಸಂಜೆ 5 ಗಂಟೆಗೆ ಮಹಾವೀರ ಹೋಟೆಲ್ ಅಂಡ್ ರೆಸಾರ್ಟ್ ಪುತ್ತೂರು ಇಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಈ ಪುತ್ತೂರಿನ ವಾಣಿಜ್ಯೋದ್ಯಮಿ ಸಹಜ ರೈ ಬಳಜ್ಜ, ವಿಟಿವಿ ವಿಟ್ಲ ಆಡಳಿತ ನಿರ್ದೇಶಕರಾಗಿರುವ ರಾಮದಾಸ್ ಶೆಟ್ಟಿ ಹಾಗೂ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು ಮತ್ತು ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆ ಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ 10 ತಂಡಗಳ ಮಾಲಕರು ಉಪಸ್ಥಿತರಿದ್ದರು. ಸಂಪ್ಯ ವಿಷ್ಣುಮೂರ್ತಿ ತಂಡದ ಮಾಲಕರು ಡಾಕ್ಟರ್ ಸುರೇಶ್ ಪುತ್ತೂರಾಯ, ಹೊಸ ಮನೆ ಕ್ರಿಕೆಟರ್ಸ್ ತಂಡದ ಮಾಲಕ ಗಂಗಾಧರ್ ಅಮೀನ್ ಹೊಸಮನೆ ಶ್ರೀ ದತ್ತ್ ಕ್ರಿಕೆಟರ್ಸ್ ತಂಡದ ಮಾಲಕ ನಿತಿನ್ ಪಕ್ಕಳ,
ಟೀಮ್ ರತ್ನಶ್ರೀ ಇದರ ಮಾಲಕ ಜಯಂತ ಶೆಟ್ಟಿ ಕಂಬಳದಡ್ಡ, ಸೆವೆನ್ ಡೈಮಂಡ್ಸ್ ಅಂಡ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಮಾಲಕ ಶರತ್ ಆಳ್ವ, ಆರ್ಯನ್ ಮೊಂನ್ ಸ್ಟರ್ ಮೇರ್ಲ ಇದರ ಮಾಲಕ ಸಂತೋಷ್ ಸುವರ್ಣ ಮೇರ್ಲ, ಸ್ವರ್ಣ ಸ್ಟ್ರೈಕರ್ಸ್ ಇದರ ಮಾಲಕ ಸುರೇಶ್ ಪೆಲತ್ತಡಿ, ಮರಕ್ಕ ಚಾಲೆಂಜರ್ಸ್ ಇದರ ಮಾಲಕ ನರೇಂದ್ರ ನಾಯಕ್ ಮರಕ್ಕ,ಟೀಮ್ ಕಾರ್ಪಾಡಿ ಇದರ ಮಾಲಕ ಬಾಲಚಂದ್ರ ಗೌಡ, ಟೀಮ್ ಎಸ್ ಕೆ ಸಿ ಪುತ್ತೂರು ಇದರ ಮಾಲಕ ಪ್ರೀತಮ್ ಶೆಟ್ಟಿ ಮೇರ್ಲ ಹಾಗೂ ತಂಡಗಳ ಐಕಾನ್ ಆಟಗಾರರು ಮತ್ತು ಹಲವು ಗಣ್ಯರು ಹಾಗೂ ಎಲ್ಲಾ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶ್ರೇಯಸ್ ಶೆಟ್ಟಿ ನಿರೂಪಿಸಿದರು. ಹೊಸಮನೆ ಕ್ರಿಕೆಟರ್ಸ್ ನ ಕಾರ್ಯದಶಿಗಳಾದ ಪವನ್ ಶೆಟ್ಟಿ ವಂದಿಸಿದರು.ಫೆಬ್ರವರಿ 8 ಮತ್ತು 9ರಂದು ಈ ಪಂದ್ಯಾಟವು ನಡೆಯಲಿರುವುದು. 9ರಂದು ರಾತ್ರಿ ಅರ್ಯಾಪು ಮ್ಯೂಸಿಕಲ್ ನೈಟ್ ಕೂಡ ನಡೆಯಲಿರುವುದು ಎಂದು ಹೊಸಮನೆ ಕ್ರಿಕೆಟರ್ಸ್ ನ ಅಧ್ಯಕ್ಷರಾಗಿರುವ ಧನುಷ್ ಹೊಸಮನೆ ತಿಳಿಸಿದ್ದಾರೆ.