Wednesday, February 12, 2025
ದಕ್ಷಿಣ ಕನ್ನಡಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮದರ್ಶಿಗಳಾದ ಡಾ ವೀರೇಂದ್ರ ಹೆಗಡೆಯವರಿಂದ CET ಮತ್ತು NEET ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಶೈಕ್ಷಣಿಕದ ಹೊತ್ತಿಗೆ ಹೊರ ತಂದಿರುವ NEST ಪ್ರಕಾಶನ ದ ಗಣಿತ ಹಾಗೂ ವಿಜ್ಞಾನ ದ 4 ಪುಸ್ತಕಗಳ ಲೋಕಾರ್ಪಣೆ-ಕಹಳೆ ನ್ಯೂಸ್

ಧರ್ಮಸ್ಥಳ: ವಿದ್ಯಾರ್ಥಿಗಳಿಗಾಗಿ ಪುಸ್ತಕದ ಲೋಕಾರ್ಪಣೆ ಮಾಡಿದ ಡಾ ವೀರೇಂದ್ರ ಹೆಗಡೆಯವರು ಕಳೆದ ಬಾರಿ NEST ಪ್ರಕಾಶನದ CET  ಮಾರ್ಗದರ್ಶನದ ಗಣಿತ ಪುಸ್ತಕವು ಸಾವಿರಾರು ವಿದ್ಯಾರ್ಥಿಗಳಿಗೆ ಅಮೂಲ್ಯ ಕೊಡುಗೆ ಕೊಟ್ಟಿದೆ. NEET ಮತ್ತು CET  ಬರೆಯುವ ರಾಜ್ಯದ ಒಳಗೂ ಹಾಗೂ ಹೊರಗಿನ ವಿದ್ಯಾರ್ಥಿಗಳಿಗಾಗಿ ಸುಮಾರು 2 ವರ್ಷಗಳ ಕಾಲ ಪ್ರಯತ್ನ ಮತ್ತು ತಪಶ್ಚರ್ಯ ದಿಂದ ತಯಾರಾದ NEST ಪ್ರಕಾಶನ ಗ್ರೂಪ್ ನ ಈ ಪ್ರಯತ್ನಕ್ಕೆ ಶ್ರೀ ಮಂಜುನಾಥ ದೇವರು ಕೃಪೆ ಮಾಡಲಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಪ್ರಕಾಶ ಬೀರಲಿ. ಬೋಧಕರು ಉಪಯೋಗ ಪಡೆದುಕೊಳ್ಳಲಿ ಮುಂದೆಯು NEST ಪ್ರಕಾಶನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಶಕ್ತಿ ಮತ್ತು ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.

NEST ಪ್ರಕಾಶನದ ಈ ಪ್ರಯತ್ನ ಕನ್ನಡದ ಶೈಕ್ಷಣಿಕ ಚರಿತ್ರೆಯಲ್ಲಿ ಸ್ಮರಣೀಯವಾಗುದು ಖಂಡಿತ ಎಂದರು.ಸಿರಿ ಸಂಸ್ಥೆಯ ಎಂ. ಡಿ ಕೆ. ಎನ್ ಜನಾರ್ದನ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಟಾನದ ಶ್ರೀ ಸದಸ್ಯ ಸತೀಶ್ ಶೆಟ್ಟಿಗಾರ್, ಆಸರೆ ಹಿರಿಯ ನಾಗರೀಕ ರ ಸೇವಾ ಸಂಸ್ಥೆ ಯ ವ್ಯವಸ್ತಾಪ ಕಾರದ ಪೆನ್ ವೆಲ್ ಸೋನ್ಸ್, ಉಸಿರಿಗಾಗಿ ಸಂಘ ಟನೆಯ ಸಂತೋಷ್ ಎಂ ಶೆಟ್ಟಿಗಾರ್, ಇವರ ಸಹಕಾರ ದೊಂದಿಗೆ ಕಾರ್ಯಕ್ರಮ ನಡೆಯಿತು.
NEST ಪ್ರಕಾಶನ ದ ಉಪನ್ಯಾಸಕರು ಆದ ರಕ್ಷಿತ್ ಕುಮಾರ್, ಅಭಿಷೇಕ್ ಉಪಸ್ಥಿತರಿದ್ದರು, ಶೇಖರ್ ಪೂಜಾರಿ ಕೊಪ್ಪ ಸಹಕಾರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು